ತುಂಬಾ ದಿನಗಳ ಬಳಿಕ, ಮೊನ್ನೆ ಆ್ಯಂಕರ್ ಅನುಶ್ರೀ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಗೆ ಬಂದಿದ್ರು. ಆಗ ಅನುಶ್ರೀಗೆ ಫ್ಯಾನ್ಸ್ ಸುಮಾರು ಪ್ರಶ್ನೆಗಳನ್ನ ಕೇಳಿದ್ರು. ಜೊತೆಗೆ ಅದಿಕಪ್ರಸಂಗತನ ಮಾತುಗಳನ್ನೂ ಆಡಿದ್ದಾರೆ. ಅದಕ್ಕೆ ಅನುಶ್ರೀ ತಾಳ್ಮೆಯಿಂದಲೇ ಉತ್ತರಿಸಿದ್ದಾರೆ. ಆದ್ರೆ ಉತ್ತರ ಸ್ವಲ್ಪ ಖಾರವಾಗಿಯೇ ಇತ್ತು. ಲೈವ್ ಬಂದಿದ್ದು ಯಾಕೆ ಅನ್ನೋ ಪ್ರಶ್ನೆಗೆ, ಯಾವುದಕ್ಕೂ ಗ್ಯಾರಂಟಿ ಇಲ್ಲಾ. ಅದಕ್ಕೆ ಲೈವ್ ಬಂದಿದ್ದೀನಿ. ಇನ್ಮೇಲೆ ಏನು ಮಾಡ್ಬೇಕು ಅನ್ಸತ್ತೋ, ಅದನ್ನ ಮಾಡಿಬಿಡಬೇಕು, ತೀರಾ ಯೋಚನೆ ಮಾಡ್ಬಾರ್ದು ಅಂದಿದ್ದಾರೆ.
ಮೊದ ಮೊದಲು ಎಲ್ಲರೂ ನಿಮ್ಮ ಮದುವೆ ಯಾವಾಗ ಅಂತಾ ಕೇಳಿದ್ರು. ಅದಕ್ಕೆ ಅನುಶ್ರೀ, ಆಗೋಣಾ.. ಆದ್ರೆ ಅದನ್ನ ಬಿಟ್ಟು ಈ ವರ್ಷ ಯಾವುದಾದ್ರೂ ಬೇರೆ ಪ್ರಶ್ನೆ ಕೇಳಿ, ಸಂತೋಷವಾಗುವ ಪ್ರಶ್ನೆ ಕೇಳಿ ಎಂದಿದ್ದಾರೆ. ಅದಕ್ಕೆ ಓರ್ವ, ನಿಮಗೆ ವಯಸ್ಸಾಯ್ತು ಎಂದಿದ್ದಾನೆ. ಅದಕ್ಕೆ ಉತ್ತರಿಸಿದ ಅನುಶ್ರೀ, ವಯಸ್ಸು ಎಲ್ಲರಿಗೂ ಆಗತ್ತೆ. ನಿಮಗೂ ಮುಂದೆ ವಯಸ್ಸಾಗತ್ತೆ, ನೀವು ತಾತಾ ಆಗ್ತೀರಿ. ನಿಮ್ಮ ತಾಯಿ ಅಜ್ಜಿಯಾಗ್ತಾರೆ, ನಿಮ್ಮ ಅಕ್ಕ-ತಂಗಿಗೂ ವಯಸ್ಸಾಗತ್ತೆ. ಎಲ್ಲರಿಗೂ ವಯಸ್ಸಾಗತ್ತೆ. ನಾವೇನು ದೇವಲೋಕದಿಂದ ಇಳಿದು ಬಂದವರಾ..? ಇದನ್ನೆಲ್ಲ ನಾವು ಎಕ್ಸೆಪ್ಟ್ ಮಾಡಿಕೊಂಡು, ಜೀವನದಲ್ಲಿ ಮುನ್ನಡೆಯಬೇಕು ಎಂದಿದ್ದಾರೆ.
ಇನ್ನು ನೀವು ಹಂದಿ ತರ ಇದ್ದೀರಾ ಅಂತಾ ಓರ್ವ ಕಾಮೆಂಟ್ ಮಾಡಿದ್ದಕ್ಕೆ, ರಿಪ್ಲೈ ಕೊಟ್ಟಿರುವ ಅನುಶ್ರೀ, ಅಯ್ಯೋ ಪಾಪ, ಇಲ್ಲಿ ಒಬ್ರು ಹಂದಿ ಥರ ಇದಾರೆ ನೋಡಿ ಅಂತಾ ಹೇಳಿದ್ದಾರೆ. ಭಾನುವಾರದಂದು ಲೈವ್ ಬಂದಾಗ, ಹೀಗೆ ಮಾತನಾಡಿದ್ದಾರೆ.
https://www.instagram.com/p/CYys81PlBH6/