- Advertisement -
Andra News: ಆಂಧ್ರ:ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಚಂತಾ ಮಂಡಲದ ವೇಮಾವರಂನಲ್ಲಿ ಸಾಯಿಬಾಬಾ ಮೂರ್ತಿಗೆ ಬಿಯರ್ ಬಾಟಲಿಗಳು ಮತ್ತು ವಿಸ್ಕಿ ಬಾಟಲಿಗಳಿಂದ ಅಭಿಷೇಕ ಮಾಡಲಾಯಿತು.
ಸೋಮವಾರ ಸಾಯಿಬಾಬಾ ಅವರ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಗ್ರಾಮಸ್ಥರು ನಡೆಸಿದ ಅಭಿಷೇಕ ಇದೀಗ ವಿವಾದಕ್ಕೆ ಕಾರಣವಾಗಿದೆ.ಮದ್ಯದ ಬಾಟಲಿಗಳಲ್ಲಿ ಜೇನು ಮತ್ತು ಇತರ ಪದಾರ್ಥಗಳಿಂದ ಬಾಬಾರ ಮೂರ್ತಿಗೆ ಅಭಿಷೇಕ ಮಾಡಲಾಗಿತ್ತು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇದು ದೇವರಿಗೆ ಮಾಡಿದ ಅವಮಾನ ಎನ್ನುತ್ತಿದ್ದಾರೆ.
- Advertisement -