ಮೇ.20ರಂದು ‘ಆನೇಕಲ್ ವಾರ್ಡ್’ಗಳ ಉಪ ಚುನಾವಣೆ

ಬೆಂಗಳೂರು ನಗರ ಜಿಲ್ಲೆ : ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಆನೇಕಲ್ ಪುರಸಭೆಯ ವಾರ್ಡ್ ಸಂಖ್ಯೆ 14, 16, 17 ರಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳಲು ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ರವರು ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಕರ್ನಾಟಕ ಪೌರನಿಯಮಗಳ (ಚುನಾವಣೆ) ನಿಯಮಗಳು,1979 ನಿಯಮ 10 ಮತ್ತು ಕರ್ನಾಟಕ ಪೌರಾಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ ನಿಯಮ 8ರ ಪ್ರಕಾರ ಬೆಂಗಳೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಖಾಲಿ ಸ್ಥಾನಗಳಿಗೆ ಉಪ ಚುನಾವಣೆಯನ್ನು ನಡೆಸಲಾಗುವುದು.

ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ದಿನಾಂಕ 02-05-2022 ರಂದು ಹೊರಡಿಸಲಾಗಿದ್ದು, ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ 09-05-2022 ಆಗಿದ್ದು, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ದಿನಾಂಕ 12-05-2022 ಕೊನೆಯ ದಿನವಾಗಿದ್ದು, ಮತದಾನವನ್ನು ದಿನಾಂಕ 20-05-2022 ರಂದು ಬೆಳಿಗ್ಗೆ 07 ಗಂಟೆಯಿಂದ ಸಾಯಂಕಾಲ 05 ಗಂಟೆಯ ವರೆಗೆ ಹಾಗೂ ಮರು ಮತದಾನವಿದ್ದಲ್ಲಿ ದಿನಾಂಕ 21-05-2022 ರಂದು ಬೆಳಿಗ್ಗೆ 07 ಗಂಟೆಯಿಂದ ಸಾಯಂಕಾಲ 05 ಗಂಟೆಯವರೆಗೆ ನಡೆಸಲಾಗುವುದು. ಮತಗಳ ಎಣಿಕೆಯನ್ನು ದಿನಾಂಕ 22-05-2022 ರಂದು ಬೆಳಿಗ್ಗೆ 8 ಗಂಟೆಗೆ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

About The Author