Sunday, September 8, 2024

Latest Posts

Anganavadi center-ಅಂಗನವಾಡಿ ಕೇಂದ್ರಗಳಲ್ಲಿ ಕೊಳೆತ ಮೊಟ್ಟೆ ವಿತರಣೆ

- Advertisement -

ಹಾಸನ : ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮತ್ತು ಬಾಣಂತಿ ಮಹಿಳೆಯರಿಗೆ  ಪೌಷ್ಠಿಕಾಂಶಯುಕ್ತ ಆಹಾರ ಒದಗಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆಗಳನ್ನು ವಿತರಿಸಲಾಗುತ್ತದೆ. ಆದರೆ ಇತ್ತೀಚಿಗೆ ಕಳಪೆ ಗುಣ ಮಟ್ಟದ  ಮೊಟ್ಟೆಗಳು ವಿತರಣೆ ಆಗುತ್ತಿರುವುದನ್ನು ಕಂಡು ಜನರು ಆಕ್ರೋಶಗೊಂಡಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರಿಗೆ ವಿತರಿಸಲಾದ ಮೊಟ್ಟೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅವುಗಳನ್ನು ಬೇಯಿಸಿ ಸಿಪ್ಪೆ ಸುಲಿದು ನೋಡಿದಾಗ ಒಳಗಿರುವ ಮೊಟ್ಟೆ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆತು ಹೋಗಿದೆ ಬಾಣಂತಿಯರು ತಿನ್ನಲು ಆಗದೆ  ಹಿಡಿ ಹಿಡಿ ಶಾಪ ಹಾಕುತಿದ್ದಾರೆ.

ಹಾಸನ ಹಾವೇರಿ ಕೊಡಗು ಜಿಲ್ಲೆಗಳಲ್ಲಿಕೊಳೆತ ಮೊಟ್ಟೆ ವಿತರಣೆಯಾಗಿರುವುದು ಬೆಳಕಿಗೆ ಬಂದಿದೆ.ಮೊಟ್ಟೆ ವಿತರಣೆ ಮಾಡಿರೊ ಗುತ್ತಿಗೆದಾರ ಹಾಗು ಅಧಿಕಾರಿ ಈ ಬ್ರಷ್ಟಾಚಾರದಲ್ಲಿ ಶಾಮೀಲಾಗಿದ್ದು  ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮಹಿಳೆಯರು ಅಗ್ರಹಿಸಿದ್ದಾರೆ. ಕಳಪೆಗುಟಮಟ್ಟದ ಮೊಟ್ಟೆ ನೀಡಿದ ಗುತ್ತಿಗೆದಾರನನ್ಮು ಕಪ್ಪು ಪಟ್ಟಿಗೆ ಸೇರಿಸಿ ಎಂದು ಒತ್ತಾಯ ಮಾಡಿದ್ದಾರೆ.

Narway- ಸಾವನ್ನೇ ನಿಷೇಧಿಸಿದ ದೇಶ ಇಲ್ಲಿ ಸಾವೇ ಆಗುವುದಿಲ್ಲ..!

Hareesh Shetty : ಬಸ್ ಚಾಲಕ ಬಾವಿಗೆ ಹಾರಿ ಆತ್ಮಹತ್ಯೆ

Fact check:ಮೋದಿಜಿ ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನ

- Advertisement -

Latest Posts

Don't Miss