ಬೀದರ್: ಸರ್ಕಾರ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಬೇಕು ಅಂತ ಪ್ರತಿ ಗ್ರಾಮಗಳಲ್ಲಿಯೂ ಅಂಗನವಾಡಿ ಕೇಂದ್ರಗಳನ್ನು ತೆರದು ಅಲ್ಲಿ ಪುಟಾಣಿ ಮಕ್ಕಳಿಗೆ ಊಟ,ಹಾಲು,ಮೊಟ್ಟೆ,ಗಂಜಿ ವ್ಯವಸ್ಥೆ ಮಾಡುತ್ತಾರೆ ಆದರೆ ಇಲ್ಲಿ ಅಂಗನವಾಡಿ ಕೇಂದ್ರದ ಮೇಲ್ಚಾವಣಿಯೇ ಕಳಚಿ ಬಿದ್ದಿದೆ.
ಹೌದು ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿಯಲ್ಲಿ ಗ್ಆಮ ಪಂಚಾಯಿತಿಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಯಾಕೆಂದರೆ ಕಳೆದ ಒಂದು ವರ್ಷದಿಂದ ಅಂಗನವಾಡಿ ಮೇಲ್ಚಾವಣಿ ಕುಸಿದು ಮಕ್ಕಳಿಗೆ ಈ ಗ್ರಾಮದಲ್ಲಿ ಇದ್ದು ಇಲ್ಲದಂತಾಗಿದೆ.
ಮೇಲ್ಛಾವಣಿ ಕುಸಿದು ಒಂದು ವರ್ಷ ಕಳೆದರು ಅಧಿಕಾರಿಗಳು ನಮಗೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಹಲವು ಬಾರಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೇ ಮನವಿ ಮಾಡಿದರು ಅಂಗನವಾಡಿಯ ಮೆಲ್ಚಾವಣಿ ಸರಿಪಡಿಸದೆ ದರ್ಪ ಮೆರೆಯುತ್ತಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳುಮೆಲ್ಚಾವಣಿ ಸರಿಪಡಿಸದ ಕಾರಣ ಅಂಗನವಾಡಿ ಬೇರೆ ಕಡೆ ಸ್ಥಳಾಂತರಿಸಿದ ಹಿನ್ನೆಲೆ ಮಕ್ಕಳಿಗೆ ಊಟದ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ಆರೋಪ ಕೆಳಿಬರುತ್ತಿದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಮಾಡಿದರೆ ಗ್ರಾಮ ಪಂಚಾಯಿತಿಯಲ್ಲಿ ದುಡ್ಡಿಲ್ಲ ಎನ್ನುವ ದರ್ಪದ ಉತ್ತರ ನಿಡುತ್ತಿದ್ಧಾರೆ.
Budjet: ಹುಬ್ಬಳ್ಳಿ ಅಭಿವೃದ್ದಿಗೆ ಅನುದಾನ ಸಿಗುತ್ತಿಲ್ಲ.ವಿಪಕ್ಷ ನಾಯಕಿ ಆರೋಪ
Felicitation : ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ