Sunday, September 8, 2024

Latest Posts

Anganavadi Warden: ಗ್ರಾಮಸ್ಥರ ವಿರುದ್ದ ಅಂಗನವಾಡಿ ಕಾರ್ಯಕರ್ತೆಯ ದರ್ಪ

- Advertisement -

ಹುಣಸೂರು: ಬಿಳಿಕೆರೆ ಹೋಬಳಿ ವ್ಯಾಪ್ತಿಗೆ ಬರುವ ದೇವಲಾಪುರ ಗ್ರಾಮಸ್ಥರಿಂದ ಅಂಗನವಾಡಿ ಕಾರ್ಯಕರ್ತೆಯನ್ನು ವರ್ಗಾವಣೆ ಮಾಡುವಂತೆ ಅಗ್ರಹಿಸಿ ಹುಣಸೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆವರಣದಲ್ಲಿ ಪ್ರತಿಭಟನೆ ಮಾಡಿದರು.

ದೇವಲಾಪುರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸರಿಯಾದ ಪೋಷಣೆ ಸಿಗುತ್ತಿಲ್ಲ ಇಲಾಖೆಯಿಂದ ಬರುವ ಆಹಾರ ಪದಾರ್ಥಗಳನ್ನು ಸರಿಯಾಗಿ ಕೊಡುತ್ತಿಲ್ಲ. ಅವರ ಮನೆಗೆ ತೆಗೆದುಕೊಂಡು ಹೋಗ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಸರಿಯಾದ ಸಮಯಕ್ಕೆ ಅಂಗನವಾಡಿ ಕೇಂದ್ರದ ಬಾಗಿಲು ತೆಗಿಯೋದಿಲ್ಲ. ಗ್ರಾಮಸ್ಥರು ಪ್ರಶ್ನೆ ಮಾಡಿದ ಗ್ರಾಮದ  ಯುವಕರ ಮೇಲೆ ಪೊಲೀಸ್ ಠಾಣೆಗೆ ಹೋಗಿ  ಅತ್ಯಾಚಾರದ ಆರೋಪದಡಿ ದೂರು ಕೊಟ್ಟು ಪೊಲೀಸ ರಿಂದ ಹಲ್ಲೆ ಮಾಡಿಸಲು ಮುಂದಾಗುತ್ತಾರೆ.ಅಂಗನವಾಡಿ ಕಾರ್ಯಕರ್ತೆ ಶ್ರುತಿ ರವರ ದುರಾಡಳಿತ ಕಂಡು ಗ್ರಾಮಸ್ಥರು CDPO ರಶ್ಮಿ ರವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. CDPO ರಶ್ಮಿಯವರು ಸಾರ್ವಜನಿಕರ ದೂರವಾಣಿ ಕರೆಗೆ ಸರಿಯಾದ ಉತ್ತರ ಕೊಡುತ್ತಿಲ್ಲ ಉಡಾಫೆ ಉತ್ತರಕೊಟ್ಟು ಅಂಗನವಾಡಿ ಕಾರ್ಯಕರ್ತೆಯ ಪರವಾಗಿ ಮಾತಾಡ್ತಾರೆ

ಗ್ರಾಮಸ್ಥರು ಅಂಗನವಾಡಿ ಕಾರ್ಯಕರ್ತೆ. ಶ್ರುತಿಗೆ ಮಕ್ಕಳನ್ನು ಸರಿಯಾಗಿ ಪೋಷಣೆ ಮಾಡಿ ಸರಿಯಾದ ಸಮಯಕ್ಕೆ ಅಂಗನವಾಡಿ ತೆರೆಯಿರಿ ಇಲ್ಲವಾದರೆ ನಿಮ್ಮ ಮೇಲಾಧಿಕಾರಿಗಳಿಗೆ ದೂರು ಕೊಡ್ತೀವಿ ಎಂದರೆ
ಶ್ರುತಿ ಅಧಿಕಾರಿಗೆ ಮಾತ್ರವಲ್ಲ CM ಸಿದ್ದರಾಮಯ್ಯ ಅವರಪ್ಪನಿಗೆ ದೂರು ಕೊಡಿ ನನ್ನ ಯಾರೂಕೂಡಾ ವರ್ಗಾವಣೆ ಮಾಡುವುದಕ್ಕೆ ಆಗೋದಿಲ್ಲ ನಾನು ಎಷ್ಟು ಲಂಚ ಬೇಕಾದ್ರು ಕೊಟ್ಟು ಇಲ್ಲೆ ಇರ್ತೀನಿ ಎಂದು ಉಡಾಫೆ ಉತ್ತರಗಳನ್ನು ನೀಡಿರುತ್ತಾರೆ

ಬೇಸರಗೊಂಡ ಗ್ರಾಮಸ್ಥರು CDPO ಕಚೇರಿ ಮುಂದೆ ಪ್ರತಿಭಟನೆ ನೆಡೆಸಲು ಮುಂದಾದ್ರು ಅಂಗನವಾಡಿ ಕಾರ್ಯಕರ್ತೆ ಶ್ರುತಿ ಸಹಾಯಕಿ ಜಯಲಕ್ಷ್ಮಿ ಅವರನ್ನು ವರ್ಗಾವಣೆ ಮಾಡಿ  ಬೇರೆ ಕಾರ್ಯಕರ್ತೆ ಸಹಾಯಕಿಯನ್ನು ನಮ್ಮ ಅಂಗನವಾಡಿಗೆ ಕೊಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ರು

ವರದಿ :-ರವಿಕುಮಾರ್ ಹುಣಸೂರು

Shivaraj Tangadagi : ಸರ್ಕಾರದ ಯೋಜನೆ ಜನರಿಗೆ ನೇರವಾಗಿ ತಲುಪಬೇಕು: ಸಚಿವ‌ ತಂಗಡಗಿ

ಈ 5 ಎಲೆಗಳು ಹಿಂದೂಗಳಲ್ಲಿ ಪೂಜನೀಯ ಸ್ಥಾನವನ್ನು ಪಡೆದಿವೆ..

For Money: ಕತ್ತರಿಯಿಂದ ಬೆನ್ನಿಗೆ ಇರಿದು ಪರಾರಿ

- Advertisement -

Latest Posts

Don't Miss