www.karnatakatv.net: ಬೆಳಗಾವಿ: ಬೆಳಗಾವಿ ನಗರದಲ್ಲಿ ಆಷಾಢ ಏಕಾದಶಿಯನ್ನು ಅತೀ ಸರಳತೆಯಿಂದ ಆಚರಣೆ ಮಾಡುತ್ತಿದ್ದು ಇವತ್ತು ಬೆಳಗ್ಗೆ ಬೆಳಗಾವಿ ಉತ್ತರ ಭಾಗದ ಶಾಸಕ ಅನಿಲ್ ಬೆನಕೆ ಅವರು ನಗರದ ವಿಠ್ಠಲ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು.
ಕೋರೊನಾ ಮಹಾಮಾರಿಯಿಂದ ಜಿಲ್ಲೆಯ ದೇವಸ್ಥಾನಗಳ ಬಾಗಿಲನ್ನ ಮುಚ್ಚಲಾಗಿತ್ತು.ಆದರೆ ಇವಾಗ ಸರಕಾರ ಲಾಕಡೌನ ತೆರವುಗೊಳಿಸಿ ಒಂದಷ್ಟು ಮಂದಿರಗಳನ್ನ ತೆರೆಯಲಿಕೆ ಅನುಮತಿ ನೀಡಿದೆ ಇದರಿಂದ ಜನರು ದೇವರ ದರ್ಶನ ಪಡೆಯಲಿಕೆ ಕೋರೊನಾ ಮಾರ್ಗಸೂಚಿ ಅನುಸರಿಸಿ ದರ್ಶನ ಪಡೆಯಲಿಕೆ ಆಗಮಿಸಿದರು.
ಬೆಳಗಾವಿ ನಗರದ ಜನತೆ ತೆರಳಿ ಇವತ್ತು ಆಷಾಡ ಏಕಾದಶಿ ನಿಮಿತ್ತವಾಗಿ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡರದುಕೊಳ್ಳುವುದು ಸಹಜವಾಗಿತ್ತು.ಹಾಗೇಯೆ ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತ ಕ್ಷೇತ್ರದ ಶಾಸಕ ಅನಿಲ್ ಬೆನಕೆ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ಪಡೆದುಕೊಂಡು ಕೋರೊನಾ ಮೂರನೇ ಅಲೆ ಬರದಂತೆ ದೇವರಲ್ಲಿ ಪ್ರರ್ಥಿಸಿದರು.