Thursday, November 21, 2024

Latest Posts

ತಿರುಮಲ ಲಡ್ಡು ಪ್ರಸಾದದಲ್ಲಿ ಕೊಬ್ಬು? – ಸಿಎಂ ಗಂಭೀರ ಆರೋಪ

- Advertisement -

ತಿರುಮಲದ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬನ್ನು ಬಳಸಲಾಗುತ್ತಿದೆಯಾ? ಭಕ್ತರು ಬೆಚ್ಚಿಬೀಳುವ ಆಘಾತಕಾರಿ ಮಾಹಿತಿಯೊಂದು ಬೆಳಕಿಗೆ ಬಂದಿದೆ. ತಿರುಮಲದ ಲಡ್ಡು ಪ್ರಸಾದಕ್ಕೆ ಪ್ರಾಣಿಯ ಕೊಬ್ಬನ್ನು ಬಳಸಿದ್ದಾರೆ ಅನ್ನೋ ಸ್ಫೋಟಕ ಆರೋಪವೊಂದು ಕೇಳಿಬಂದಿದೆ.. ಈ ಹಿಂದೆ ಇದ್ದ ಜಗನ್ ಮೋಹನ್ ರೆಡ್ಡಿ ಸರ್ಕಾರ, ಲಡ್ಡು ತಯಾರಿಸೋಕೆ ತುಪ್ಪದ ಬದಲು ಪ್ರಾಣಿ ಮಾಂಸದಿಂದ ಬಂದ ಕೊಬ್ಬನ್ನು ಬಳಸಿತ್ತು ಅಂತ ಸ್ವತಃ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.. ಹಿಂದಿನ ಜಗನ್ ಸರ್ಕಾರ ತಿರುಮಲ ಪ್ರಸಾದಲ್ಲಿ ಕಲಬೆರಕೆ ಮಾಡಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದು ಅಪವಿತ್ರಗೊಳಿಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ..

ಸಾಮಾನ್ಯವಾಗಿ ತಿರುಮಲ ಲಡ್ಡು ಪ್ರಸಾದಕ್ಕೆ ಶುದ್ಧ ಹಸುವಿನ ತುಪ್ಪ ಬಳಸಬೇಕು.. ಆದರೆ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುವ ಮೂಲಕ ವೆಂಕಟೇಶ್ವರ ಸ್ವಾಮಿಗೆ ಅವಮಾನ ಮಾಡಿದ್ದಾರಂತೆ… ಚಂದ್ರಬಾಬು ನಾಯ್ಡು ಸರ್ಕಾರ ಸರ್ಕಾರ ಬಂದ ಬಳಿಕ ಎಲ್ಲ ಗುಣಮಟ್ಟದ ಪದಾರ್ಥಗಳೊಂದಿಗೆ ಲಡ್ಡು ಪ್ರಸಾದವನ್ನು ತಯಾರಿಸುತ್ತಿದ್ದೇವೆ ಅಂತ ಹೇಳಿಕೆ ಕೊಟ್ಟಿದ್ದಾರೆ

ತಿರುಮಲದ ಲಡ್ಡು ತಯಾರಿಕೆಗೆ ಕರ್ನಾಟಕದ ನಂದಿನಿ ತುಪ್ಪದ ಜೊತೆ ಬೇರೆ ಬೇರೆ ರಾಜ್ಯಗಳ ತುಪ್ಪವನ್ನೂ ಬಳಸಲಾಗುತ್ತೆ.. ಆದ್ರೆ ಜಗನ್ ಸರ್ಕಾರ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಿ, ತಿರುಮಲಕ್ಕೆ ಸಪ್ಲೈ ಮಾಡಿದೆ. ಇದೇ ಕಲಬೆರಕೆ ತುಪ್ಪದಿಂದಲೇ ತಿರುಮಲದ ಲಡ್ಡು ತಯಾರಿಸಲಾಗಿದೆ ಅಂತ ಆರೋಪಿಸಿದ್ದಾರೆ…

ಸಿಎಂ ಚಂದ್ರಬಾಬು ನಾಯ್ಡು ಅವ್ರ ಆರೋಪವನ್ನ ವೈಎಸ್​ಆರ್​ಸಿ ರಾಜ್ಯಸಭಾ ಸಂಸದ ವೈ.ವಿ.ಸುಬ್ಬಾರೆಡ್ಡಿ ಖಂಡಿಸಿದ್ದಾರೆ.. ಜಗನ್ ಸರ್ಕಾರವಿದ್ದಾಗ ವೈ.ವಿ.ಸುಬ್ಬಾರೆಡ್ಡಿ ಅವರೇ ಟಿಟಿಡಿ ಅಧ್ಯಕ್ಷರಾಗಿದ್ರು.. ಅವ್ರು ಈಗ ಸ್ಪಷ್ಟತೆ ಕೊಟ್ಟಿದ್ದಾರೆ.. ತಿರುಮಲದ ಪಾವಿತ್ರ್ಯತೆ ಹಾಳುಮಾಡುವ ಯಾವುದೇ ಕೆಲಸ ಆಗಿಲ್ಲ. ಆದ್ರೆ ಚಂದ್ರಬಾಬು ನಾಯ್ಡು ಅವ್ರೇ ಸುಳ್ಳು ಹೇಳಿ ಪಾವಿತ್ರ್ಯತೆ ಹಾಳು ಮಾಡ್ತಿದ್ದಾರೆ. ತಿರುಮಲ ಪ್ರಸಾದದ ಬಗ್ಗೆ ಅವರ ಹೇಳಿಕೆ ದುರುದ್ದೇಶದಿಂದ ಕೂಡಿದೆ.. ಇಂತಾ ಆರೋಪವನ್ನ ಸಹಿಸಲ್ಲ, ಅಂತ ಹೇಳಿದ್ದಾರೆ.. ಅಲ್ದೇ ಭಕ್ತರ ನಂಬಿಕೆಯನ್ನು ಬಲಪಡಿಸಲು ನಾನು ನನ್ನ ಕುಟುಂಬದ ಜೊತೆ ಬಂದು ವೆಂಕಟೇಶ್ವರನ ಮುಂದೆಯೇ ಪ್ರಮಾಣ ಮಾಡ್ತೀನಿ ಅಂತ ಹೇಳಿದ್ದಾರೆ…

ತಿರುಮಲ ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬನ್ನು ಬಳಸಲಾಗಿತ್ತಾ? ಕಲಬೆರಕೆ ತುಪ್ಪವನ್ನ ಸಪ್ಲೈ ಮಾಡಲಾಗಿತ್ತಾ ಅನ್ನೋದು ತನಿಖೆ ಆಗ್ಬೇಕು ಅನ್ನೋ ಆಗ್ರಹ ಕೇಳಿಬಂದಿದೆ.

- Advertisement -

Latest Posts

Don't Miss