Viral Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿಯೇ ಸದ್ದು ಮಾಡುತ್ತಿರುವ ವೀಡಿಯೋ ಇದು. ಒಂದೆಡೆ ವ್ಯಕ್ತಿಯೋರ್ವ ನಿರಾಶ್ರಿತನಾಗಿ ಕೈಯಲ್ಲೊಂದು ನಾಯಿಮರಿಯನ್ನು ಹಿಡಿದು ಕುಳಿತಿರೋ ದೃಶ್ಯ, ಇನ್ನೊಂದು ಕ್ಷಣದಲ್ಲೇ ಅದೆಲ್ಲಿಂದಲೂ ಬಂದ ದುಷ್ಕರ್ಮಿಗಳು ನಾಯಿಮರಿಯನ್ನು ಎಳೆದೊಯ್ಯುತ್ತಿರುವ ದೃಶ್ಯ. ಅವರು ಯಾರೋ ಕಿರಾತಕರು ಅಂದು ಕೊಂಡರೆ ಖಂಡಿತಾ ಅದು ನಿಮ್ಮ ಭ್ರಮೆ ಅಷ್ಟೇ ಕಾರಣ ಅವರ್ಯಾರು ಕಿರಾತಕರಲ್ಲ. ಬದಲಾಗಿ ಅವರು ಪ್ರಾಣಿ ಹಕ್ಕುಗಳ ಚಳುವಳಿ ಕಾರರು. ಹಾಗಂತ ಇಲ್ಲಿ ಅವರು ಮಾಡಿದ್ದೇ ಸರಿ ಎಂಬಂತಿಲ್ಲ. ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಛೀ ಥೂ ಎಂದು ಛೀಮಾರಿಗಳ ಸುರಿಮಾಲೆಯೇ ಬೀಳುತ್ತಿದೆ.
Animal rights group steal homeless man's puppy pic.twitter.com/wxqJ0PlcEf
— More Crazy Clips (@MoreCrazyClips) July 3, 2023
ಇವರೇನು ಮನುಷ್ಯರಾ..? ಅವರನ್ನು ಹಾಗೇ ಹಿಂಸಿಸೋ ಅಗತ್ಯ ಏನಿತ್ತು..? ಅವರಿಬ್ಬರಿಗೂ ಜೈಲು ಶಿಕ್ಷೆಯಾಗಲಿ ಎಂಬುದಾಗೆಲ್ಲಾ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಸದ್ಯ ಇದರ ಜೊತೆ ಆ ನಿರಾಶ್ರಿತನಿಗೆ ನಾಯಿ ಮರಿಯನ್ನು ಮರಳಿ ನೀಡಿರುವ ಬಗೆಗೂ ಪತ್ರ ಲಗತ್ತಿಸಲಾಗಿದೆ. ಅಂತೂ ಆ ಎರಡು ಮುಗ್ಧ ಜೀವಗಳು ಒಂದಾದವಲ್ಲ ಎಂಬುವುದಾಗಿಯೂ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ.
He got his dog back🙏 pic.twitter.com/sHM30j4F5S
— Am I Tha Drama💋 (@NotTheOneOrTwoX) July 3, 2023
ಒಟ್ಟಾರೆ ಈ ವೀಡಿಯೋ ನೋಡಿದಾಗ ವೀಕ್ಷಕರ ಕಣ್ಣಂಚಲ್ಲಿ ನೀರು ತುಂಬುವುದಂತೂ ಸತ್ಯ.ವೈರಲ್ ವೀಡಿಯೋದ ಲಿಂಕ್ ಕೂಡಾ ಇಲ್ಲಿ ನೀಡಲಾಗಿದೆ.
ಹತ್ತು ವರ್ಷದ ಎಲ್ಲ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲಿ: ಬಸವರಾಜ ಬೊಮ್ಮಾಯಿ