Sunday, October 27, 2024

Latest Posts

Anna Bhagya: ಅಕ್ಕಿ ಕೊಡಬಾರದು ಎನ್ನುವುದು ಬಿಜೆಪಿಯ ಅತ್ಯಂತ ಅನಾಗರಿಕ ಮತ್ತು ಅಮಾನವೀಯ ಮನಸ್ಥಿತಿ

- Advertisement -

ಬೆಂಗಳೂರು:  ಸಂವಿಧಾನ ಬದಲಾವಣೆ ಆದರೆ ದೇಶದ ಶೇ 90 ಕ್ಕೂ ಹೆಚ್ಚು ಸಂಖ್ಯೆಯ ಜನರ ದುಡಿಯುವ ಮತ್ತು ಬದುಕಿನ ಅವಕಾಶಗಳು ನಾಶವಾಗುತ್ತದೆ. ಆದ್ದರಿಂದ ಸಂವಿಧಾನವನ್ನು ಉಳಿಸಿ ದೇಶದ ದುಡಿಯುವ ಜನ ವರ್ಗಗಳ ಬದುಕಿನ ಅವಕಾಶಗಳನ್ನು ಕಾಪಾಡುವ ಬಹಳ ದೊಡ್ಡ ಜವಾಬ್ದಾರಿ ದೇಶದ ಜನರ ಮೇಲಿದೆ. ಕಾಂಗ್ರೆಸ್ ಗೆ ನಾಡಿನ ಮತ್ತು ದೇಶದ ದುಡಿಯುವ ವರ್ಗಗಳು ಈ ಜವಾಬ್ದಾರಿಯನ್ನು ನೀಡಿದ್ದಾರೆ. ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಜನರ ಜೇಬಿನಲ್ಲಿರುವ ಹಣವನ್ನು ಕಿತ್ತು ಸಾವಿರಾರು ಕೋಟಿ ಒಡೆಯರಾಗಿರುವ ಶ್ರೀಮಂತರಿಗೆ ನೀಡುವುದು ಅವರ ಆರ್ಥಿಕತೆ. ನಮ್ಮ ರಾಜ್ಯಕ್ಕೆ ಬರಬೇಕಾದ ತೆರಿಗೆ ಮತ್ತು ಆರ್ಥಿಕತೆಯ ನೆರವನ್ನೂ ನೀಡದೆ ಇಡಿ ನಾಡಿನ ಜನತೆಗೆ ಬಿಜೆಪಿ ವಂಚಿಸಿದೆ. ಆದರೆ, ನಾವು ಜನರ ಜೇಬಿನಲ್ಲಿ ಹಣ ಉಳಿಯುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಆಯವ್ಯಯವನ್ನು ನಾವು ಮಂಡಿಸಿದ್ದೇವೆ. ಕರ್ನಾಟಕ ಮಾದರಿಯ ಈ ಅಭಿವೃದ್ಧಿಯನ್ನು ದೇಶದ ಎಲ್ಲಾ ರಾಜ್ಯಗಳೂ ಅಧ್ಯಯನ ನಡೆಸಿ ಅಳವಡಿಸಿಕೊಳ್ಳಲು ಮುಂದಾಗಿವೆ. ಇದು ಕರ್ನಾಟಕದ ಜನತೆಗೆ ನಮ್ಮ ಸರ್ಕಾರ ಮತ್ತು ನಮ್ಮ ಪಕ್ಷ ನೀಡಿರುವ ಅಭಿವೃದ್ಧಿಯ ಕೊಡುಗೆ ಎಂದರು.

ರಾಜ್ಯದ ಜನರ ಹಸಿವು ನೀಗಿಸಲು ಅಕ್ಕಿ ಕೊಡಿ ಎಂದರೆ ಕೊಡಲು ಒಪ್ಪದ ಬಿಜೆಪಿಯವರು ಈಗ ಆ ಸಾವಿರಾರು ಟನ್ ಅಕ್ಕಿ ಹಾಳು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಕೈಯಲ್ಲಿರುವ ಅಕ್ಕಿಗೆ ಹುಳು ಹಿಡಿಯುತ್ತಿದೆ. ಜನರು ಉಪವಾಸ ಇದ್ದರೂ ಪರ್ವಾಗಿಲ್ಲ, ಅಕ್ಕಿ ಹಾಳಾದರೂ ಪರ್ವಾಗಿಲ್ಲ ಆದರೆ ಹಸಿದವರಿಗೆ ಅಕ್ಕಿ ಕೊಡಬಾರದು ಎನ್ನುವುದು ಬಿಜೆಪಿಯ ಅತ್ಯಂತ ಅನಾಗರಿಕ ಮತ್ತು ಅಮಾನವೀಯ ಮನಸ್ಥಿತಿ ಎಂದು ವ್ಯಂಗ್ಯವಾಡಿದರು.

Footwear Shop : ಹುಬ್ಬಳ್ಳಿ : ಫೂಟ್ ವೇರ್ ಅಂಗಡಿಯಲ್ಲಿ ಶಾರ್ಟ್​ ಸರ್ಕ್ಯೂಟ್ ನಿಂದ ಅಪಾರ ನಷ್ಟ

Upendra : ನಟ ಉಪೇಂದ್ರ ಹೇಳಿಕೆ ಶೋಭೆ ತರುವಂತದಲ್ಲ: ಸದಾನಂದ ತೇರದಾಳ

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

- Advertisement -

Latest Posts

Don't Miss