Friday, October 18, 2024

Latest Posts

Siddaramaiah : ಇಂದಿನಿಂದ ಹಸಿವು ಮುಕ್ತ ಕರ್ನಾಟಕ…?!

- Advertisement -

State News: ಕರ್ನಾಟಕದ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಆಶಯದೊಂದಿಗೆ ಬಡಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಹಾಗೂ170 ರೂಪಾಯಿ ನೀಡುವ ಯೋಜನೆಯನ್ನು ಜುಲೈ 10ರಂದು ಸಿಎಂ ಸಿದ್ದರಾಮಯ್ಯ ಜಾರಿಗೊಳಿಸಿ ಟ್ವೀಟ್ ಮೂಲಕ ಜನತೆಯಲ್ಲಿ ಮನವಿಯೊಂದನ್ನು ಮಾಡಿದರು.

ಹಸಿವಿನ ಬೇನೆ ನಾಡಿನ ಬಡಜನರನ್ನು ಬಾಧಿಸದಿರಲಿ ಎಂಬ ಸದುದ್ದೇಶದೊಂದಿಗೆ ನಾವು ಇಂದಿನಿಂದ ‘ಅನ್ನಭಾಗ್ಯ’ ಯೋಜನೆಯಡಿ ಬಡಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ ಅಕ್ಕಿ ಹಾಗೂ ರೂ. 170 ನೀಡಲಿದ್ದೇವೆ. ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲಿಗೆ ನೀಡುವ ಹಣವನ್ನು ಆಹಾರ ಪದಾರ್ಥಗಳ ಖರೀದಿಗೆ ಮಾತ್ರ ಬಳಕೆ ಮಾಡಬೇಕೆಂದು ನಾಡ ಬಾಂಧವರಲ್ಲಿ ಮನವಿ ಮಾಡುತ್ತೇನೆ. ಹಸಿವಿನ ಸಂಕಟ ಅನುಭವಿಸಿದವರಿಗೆ ಮಾತ್ರ ಅರಿವಿರಲು ಸಾಧ್ಯ. ಹಸಿವುಮುಕ್ತ ಕರ್ನಾಟಕ ನಿರ್ಮಾಣದ ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ.

ಎಂಬುವುದಾಗಿ ಕರುನಾಡಿನ ಜನತೆಗೆ ಸಿಎಂ ಸಿದ್ಧರಾಮಯ್ಯ ಮನವಿ ಮಾಡಿದರು ಹಸಿವು ಅನ್ನೋದನ್ನು ನಾನು ಅನುಭವಿಸಿದ್ದೇನೆ ನಾನು ಪ್ರಮಾಣ ಪತ್ರ ವಾಚಿಸಿದ ಮರುಕ್ಷಣದಲ್ಲೇ ಅನ್ನಭಾಗ್ಯ ಅನ್ನುವ ಯೋಜನೆಯನ್ನು ಯಾರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಜಾರಿಗೊಳಿಸಿದ್ದು ಎಂದರು.

 

- Advertisement -

Latest Posts

Don't Miss