Monday, October 6, 2025

Latest Posts

ದರ್ಶನ್‌ ಕೇಸ್‌ನಲ್ಲಿ 3 ಚಾರ್ಜ್‌ಶೀಟ್‌

- Advertisement -

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೊಲೆ ಆರೋಪಿ, ನಟ ದರ್ಶನ್‌ಗೆ ಮತ್ತೊಂದು ಬಿಗ್‌ ಶಾಕ್‌ ಕಾದಿದೆ. ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ, 3 ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಇದೀಗ ಮೂರು ಪ್ರಕರಣಗಳ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಕೆಗೆ, ಪೊಲೀಸರು ತಯಾರಿ ಮಾಡಿಕೊಂಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಜೊತೆ, ದರ್ಶನ್‌ ಟೀ, ಸಿಗರೇಟ್‌ ಪಾರ್ಟಿ ಮಾಡಿದ್ರು. ಈ ವಿಚಾರದಲ್ಲಿ ಈಗಾಗಲೇ ತನಿಖೆ ನಡೆಸಿ ಮೊದಲ ಚಾರ್ಜ್‌ಶೀಟ್‌ ತಯಾರಿಸಲಾಗಿದೆ. ಮತ್ತು ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ಬಗ್ಗೆಯೂ ಉಲ್ಲೇಖಿಸಲಾಗಿದೆ. ತನಿಖಾ ವರದಿ ಬಗ್ಗೆ ಕಾನೂನು ಅಭಿಪ್ರಾಯವನ್ನು ಪೊಲೀಸರು ಪಡೆದುಕೊಂಡಿದ್ದಾರಂತೆ.

ಬಹುತೇಕ ಅಕ್ಟೋಬರ್‌ ತಿಂಗಳ ಅಂತ್ಯದೊಳಗೆ ಚಾರ್ಜ್‌ಶೀಟ್‌ ಸಲ್ಲಿಕೆ ಸಾಧ್ಯತೆ ಇದೆ. ಇನ್ನು, ಜೈಲಿನಲ್ಲಿದ್ದೇ ನಟ ದರ್ಶನ್‌ ಫೋನ್‌ ಬಳಸಿದ್ದರ ಬಗ್ಗೆ ಎರಡನೇ ಚಾರ್ಜ್‌ಶೀಟ್‌ ಹಾಕಲಾಗಿದೆ. ಸಹ ಕೈದಿಯ ಮಗನ ಜೊತೆ ವಿಡಿಯೋ ಕಾಲ್‌ನಲ್ಲಿ ದರ್ಶನ್‌ ಮಾತನಾಡಿದ್ರು.

ಮೂರನೇ ಚಾರ್ಜ್‌ಶೀಟ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪೊಲೀಸರ ವೈಫಲ್ಯದ ಬಗ್ಗೆ ಮತ್ತು ಜೈಲಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಈಗಾಗಲೇ ಜೈಲು ಅಧಿಕಾರಿಗಳ ವಿಚಾರಣೆಯನ್ನೂ ಮಾಡಲಾಗಿದೆ.
ವಿಚಾರಣೆ ಪೂರ್ಣಗೊಂಡಿರುವ ಹಿನ್ನೆಲೆ ಚಾರ್ಜ್‌ಶೀಟ್‌ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

- Advertisement -

Latest Posts

Don't Miss