- Advertisement -
www.karnatakatv.net: ಬೆಂಗಳೂರು: ಸಿಲಿಕಾನ್ ಸಿಟಿಯ ಲಕ್ಕಸಂದ್ರದಲ್ಲಿ ನಿನ್ನೆ ಮನೆ ಕುಸಿತ ಪ್ರಕರಣ ನಡೆದ ಬೆನ್ನಲ್ಲೇ ಇಂದು ಮತ್ತೊಂದು ಕಟ್ಟಡ ಕುಸಿದಿದೆ.
ಬೆಂಗಳೂರಿನ ಡೈರಿ ಸರ್ಕಲ್ ಬಳಿಯ ಕೆಎಂಎಫ್ ಕ್ವಾರ್ಟರ್ಸ್ ನ ಕಟ್ಟಡ ಕುಸಿದಿದೆ. ಸುಮಾರು 50 ವರ್ಷದ ಹಳೆಯ ಈ ಕಟ್ಟಡದಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದವು. ಇನ್ನು ಕಟ್ಟಡ ಕುಸಿಯುತ್ತಿರುವ ಶಬ್ಧ ಕೇಳಿ ಅಲ್ಲಿ ವಾಸವಿದ್ದ ಜನರು ಹೊರಗೆ ಓಡೋಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಕಟ್ಟಡ ಕುಸಿದ ಪರಿಣಾಮ ಅಕ್ಕಪಕ್ಕದ ಕಟ್ಟಡಗಳೂ ಬಿರುಕು ಬಿಟ್ಟಿವೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ,ಪೊಲೀಸರು ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಕರ್ನಾಟಕ ಟಿವಿ- ಬೆಂಗಳೂರು
- Advertisement -