Tuesday, October 14, 2025

Latest Posts

ಕರ್ನಾಟಕದಲ್ಲಿ ಮತ್ತೆ ಭೂಕಂಪ, ಆಗಿದ್ದೆಲ್ಲಿ ಗೊತ್ತಾ!?

- Advertisement -

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ನಿನ್ನೆ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಹೊನ್ನೂಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಭಾಗಗಳು ಸೇರಿದಂತೆ, ತಿಕೋಟ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.8 ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂವೈಜ್ಞಾನಿಕ ಇಲಾಖೆ ದೃಢಪಡಿಸಿದೆ.

ಶುಕ್ರವಾರ ರಾತ್ರಿ 10:01 ಕ್ಕೆ ಭೂಕಂಪನ ಅನುಭವ ಆಗಿದೆ. ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ವಿಜಯಪುರ ಗ್ರಾಮೀಣ ಭಾಗದ 12 ಕಿ.ಮೀ ಸುತ್ತ ಮುತ್ತ ಭೂಕಂಪನದ ಅನುಭವ ಆಗಿದೆ. ಈ ಭೂಕಂಪನದಲ್ಲಿ ಯಾವುದೇ ಆಸ್ತಿ, ಮಾನವ ಹಾನಿಯ ವರದಿ ಬಂದಿಲ್ಲ. ಆದರೆ ಕಂಪನದ ಅನುಭವದಿಂದ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದು, ಕೆಲವರು ರಾತ್ರಿಯಲ್ಲೇ ತಮ್ಮ ಮನೆಗಳಿಂದ ಹೊರಬಂದು ಸುರಕ್ಷತೆ ಕಲ್ಪಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಇವು ಮಾನವ ಬದುಕಿಗೆ ಅಪಾಯಕಾರಿಯಾಗುವುದಿಲ್ಲ. ಆದರೂ, ಕಂಪನದ ಅನುಭವ ಜನರಲ್ಲಿ ಆತಂಕ ಉಂಟುಮಾಡಿದೆ. ವಿಜಯಪುರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಣ್ಣಪುಟ್ಟ ಭೂಕಂಪನಗಳು ಮತ್ತೆ ಮತ್ತೆ ವರದಿಯಾಗುತ್ತಿವೆ.

ವಿಜಯಪುರದಲ್ಲಿ ಮೇಲಿಂದ ಮೇಲೆ ಭೂಕಂಪ ಸಂಭವಿಸುತ್ತಿದ್ದು, ಭಾರೀ ಸದ್ದಿನ ಬಗ್ಗೆ ಸ್ಥಳೀಯರು ಆತಂಕ ಹೊರಹಾಕಿದ್ದಾರೆ. ಕಳೆದ ತಿಂಗಳು ಸಿಂದಗಿ ಪಟ್ಟಣದಲ್ಲಿ ಸರಣಿ ರೂಪದಲ್ಲಿ ಭೂಕಂಪನ ಅನುಭವವಾಗಿತ್ತು. ಈಗ ನಗರ ಭಾಗದಲ್ಲಿ ಕಂಪನದ ಅನುಭವವಾಗಿದೆ.

ವಾರ್ಡನ್ : ಲಾವಣ್ಯ ಅನಿಗೋಳ

- Advertisement -

Latest Posts

Don't Miss