Friday, December 13, 2024

Latest Posts

ಮಾದಕ ವಸ್ತುಗಳ ಬಳಕೆದಾರರ ವಿರುದ್ದ ಮತ್ತೊಂದು ಹಂತದ ವಿಶೇಷ ಡ್ರೈವ್: 38 ಪ್ರಕರಣ ದಾಖಲು

- Advertisement -

Hubli News: ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮೀಷನರೇಟ್ ನ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕವಸ್ತು ಸೇವಿಸುವವರ ವಿರುದ್ದ ಇಂದು ಮತ್ತೊಂದು ಹಂತದ ಕಾರ್ಯಾಚರಣೆ ನಡೆಸಿದ್ದು, ಒಟ್ಟು 354 ಜನ ಡ್ರಗ್ಸ್ ಬಳಕೆದಾರರನ್ನು ವಶಕ್ಕೆ ಪಡೆದಿದೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.

ಸ್ಪೆಷಲ್‌ ಡ್ರೈವ್ ವೇಳೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ವಶಕ್ಕೆ ಪಡೆದವರನ್ನು ವೈದ್ಯಕೀಯ ಪರೀಕ್ಷೆಗಾಗಿ ಹುಬ್ಬಳ್ಳಿ ಕಿಮ್ಸ್ ಮತ್ತು ಧಾರವಾಡದ ಡಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಿದ್ದು, ಅವರಲ್ಲಿ ಒಟ್ಟು 156 ಜನರಲ್ಲಿ ಡ್ರಗ್ಸ್ ಸೇವಿಸಿರುವುದು ಧೃಢಪಟ್ಟಿರುತ್ತದೆ. ಈ ಬಗ್ಗೆ ವಿವಿಧ ಠಾಣೆಗಳಲ್ಲಿ ಒಟ್ಟು 38 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಡ್ರಗ್ಸ್ ಸೇವನೆ ಧೃಡಪಟ್ಟಿರುವ 156 ಜನರಲ್ಲಿ 79 ಜನ ಅವಳಿ ನಗರದ ವಿವಿಧ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾಗಿರುತ್ತಾರೆ. ಇಂದಿನ ಈ ಕಾರ್ಯಾಚರಣೆಯು ಮಾದಕವಸ್ತುಗಳ ಸೇವನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಸಲಾಗಿತ್ತು. ಈ ಎಲ್ಲ ಡ್ರಗ್ಸ್ ಬಳಕೆದಾರರಿಗೆ ಹುಬ್ಬಳ್ಳಿಯ‌ ಜಗದ್ಗುರು ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡಿದಂತೆ ಮತ್ತು ಅವರ ಉತ್ತಮ ಭವಿಷ್ಯಕ್ಕಾಗಿ ಕೌನ್ಸೆಲಿಂಗ್ ನಡೆಸಿದ್ದು, ಅವರುಗಳ ಪೋಷಕರಿಗೆ ಕೂಡ ಮಕ್ಕಳ ಬಗೆಗಿನ ಕಾಳಜಿಯ ಓರಿಯೆಂಟೇಶನ್ ಮಾಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

- Advertisement -

Latest Posts

Don't Miss