www.karnatakatv.net ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಹೆಚ್ಚಳದ ಬೆನ್ನಲ್ಲೇ ಸಿಎಂ ಬದಲಾವಣೆ ಕುರಿತು ಚರ್ಚೆಯಾಗ್ತಿದೆ.. ದೆಹಲಿಗೆ ತೆರಳಿ ಸಿಎಂ ವಿರುದ್ಧ ದೂರು ನೀಡಿದ ಸಚಿವ ಸಿಪಿ ಯೋಗೀಶ್ವರ್ ವಿರುದ್ಧ ಶೀಕ್ಷಣ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಮುಂದೆ ಇರುವುದು ಕೋವಿಡ್ ನಿಯಂತ್ರಣ ಮಾಡುವ ಕೆಲಸ, ನಾಯಕತ್ವ ಬದಲಾವಣೆಯಲ್ಲ ಅಂತ ಯೋಗೀಶ್ವರ್ ಪ್ರಯತ್ನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ರಾಜ್ಯದಲ್ಲಿ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿದೆ ಅನ್ನುವ ಮಾತು ರಾಜ್ಯರಾಜಕೀಯದಲ್ಲಿ ಭಾರೀ ಚರ್ಚೆಯನ್ನ ಹುಟ್ಟುಹಾಕಿದೆ.




