POLITICAL NEWS : ರಾಜ್ಯ ಬಿಜೆಪಿ ಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ಅನೇಕ ದಿನಗಳಿಂದ ಬಿವೈ ವಿಜಯೇಂದ್ರ ಮತ್ತು ಯತ್ನಾಳ್ ನಡುವೆ ವಾಕ್ಸಮರ ತಾರಕಕ್ಕೇರಿತ್ತು. ಇಬ್ಬರು ನಾಯಕರು ಒಬ್ಬರ ಮೇಲೆ ಒಬ್ಬರು ಬಹಿರಂಗವಾಗಿ ಹೇಳಿಕೆಗಳನ್ನ ನೀಡುತ್ತಿದ್ದರು. ಇದರಲ್ಲಿ ಯತ್ನಾಳ್ ಸ್ವಲ್ಪ ನೇರಾ ನೇರ ಮತ್ತು ಖಾರವಾಗಿ ವಿಜಯೇಂದ್ರ ಬಗ್ಗೆ ಹೇಳಿಕೆಗಳನ್ನ ನೀಡುತ್ತಿದ್ದರು. ಈ ಕುರಿತು ಖುದ್ದು ವಿಜಯೇಂದ್ರ ಹೈಕಮಾಂಡ್ ನ ಭೇಟಿ ಮಾಡಿ ದೂರು ನೀಡುವ ಕೆಲಸ ಮಾಡಿದರು. ಆ ನಂತರ ಯತ್ನಾಳ್ ಅಂಡ್ ಟೀಮ್ ಕೂಡ ದೆಹಲಿಗೆ ಭೇಟಿ ನೀಡಿ ಕೇಂದ್ರ ನಾಯಕರಿಗೆ ವಿಜಯೇಂದ್ರ ಬಗ್ಗೆ ದೂರು ನೀಡುವ ಕೆಲಸ ಮಾಡಿತು. ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಹೈಕಮಾಂಡ್ ಬಹಿರಂಗ ಹೇಳಿಕೆ ನೀಡಬಾರದು ಅಂತ ಎಚ್ಚರಿಕೆ ನೀಡಿತು. ಆದರೂ ಯತ್ನಾಳ್ ಸುಮ್ಮನಾಗಲಿಲ್ಲ . ಅದಕ್ಕಾಗಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ಕೂಡ ನೀಡಿತ್ತು. ಅದಕ್ಕೆ ಉತ್ತರವನ್ನು ಕೂಡ ಕೊಟ್ಟಿದ್ರು ಯತ್ನಾಳ್. ಈಗ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಸೋಮವಾರ ಮತ್ತೆ ನೋಟಿಸ್ ನೀಡಿದೆ.
ಈ ನೋಟಿಸ್ ಗೆ 72 ಗಂಟೆಗಳಲ್ಲೇ ಉತ್ತರಿಸುವಂತೆ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ದೆಹಲಿಯಲ್ಲಿದ್ದ ಯತ್ನಾಳ್ ಅವರು ಈಗ ಹೈದರಾಬಾದ್ ನತ್ತ ಪ್ರಯಾಣ ಬೆಳಸಿದ್ದು, ಬಿಜೆಪಿ ಶಿಸ್ತು ಸಮಿತಿ ನೀಡಿದ ನೋಟಿಸ್ ಇನ್ನೂ ಅವರ ಕೈಸೇರಿಲ್ಲ ಎನ್ನಲಾಗಿದೆ.