Friday, September 20, 2024

Latest Posts

ಯಶ್‌ಗಾಗಿ ರೆಡಿಯಾಗ್ತಿದೆ ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾ..!

- Advertisement -

ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಲಾಕ್‌ಡೌನ್‌ನಲ್ಲಿ ತಾವು ಏನೆಲ್ಲ ಮಾಡಿದ್ವಿ, ಮಾಡ್ತೀದಿವಿ. ಹೇಗೆ ಟೈಂ ಸ್ಪೆಂಡ್ ಮಾಡಿದ್ವಿ ಅನ್ನೋದನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಚಾಚೂ ತಪ್ಪದ ಹಾಗೇ ಅಪ್ಡೇಟ್ ಮಾಡೋದನ್ನ ನೋಡಿದ್ದೀವಿ. ಆದ್ರೆ ಇಲ್ಲೊಬ್ರು ನ್ಯಾಶನಲ್ ಸ್ಟಾರ್, ಸೋಶಿಯಲ್ ಮೀಡಿಯಾದಲ್ಲಿ ಯಾವ ಅಪ್ಡೇಟ್ಸೂ ನೀಡದೇ, ಸೀಕ್ರೇಟ್ ಆಗಿ ತಮ್ಮ ಮುಂದಿನ ಪ್ಯಾನ್ ಇಂಡಿಯನ್ ಸಿನಿಮಾದ ತಯಾರಿ ಮಾಡಿಕೊಳ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲ, ರಾಕಿಂಗ್ ಸ್ಟಾರ್ ಯಶ್.

ಮೊನ್ನೆ ಮೊನ್ನೆ ತಾನೇ ಮಗನೊಂದಿಗೆ ತೆಗೆದ ಫೋಟೋವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದ ಯಶ್, ಪತ್ನಿ ಮಗಳ ಜೊತೆಯೂ ಸುಂದರ ಕ್ಷಣಗಳನ್ನ ಕಳೆದಿದ್ದಾರೆ. ಇದರ ಜೊತೆ ರಾಕಿ ಭಾಯ್ ತಮ್ಮ ಮುಂದಿನ ಚಿತ್ರದ ತಯಾರಿಯನ್ನೂ ನಡೆಸಿದ್ದಾರೆನ್ನಲಾಗಿದೆ.

ಇಷ್ಟೇ ಅಲ್ಲದೇ, ಇನ್ನೋರ್ವ ಕನ್ನಡ ನಿರ್ದೇಶಕ ನ್ಯಾಶನಲ್ ಲೆವಲ್‌ನಲ್ಲಿ ಹೆಸರು ಮಾಡೋಕ್ಕೆ ರಾಕಿಭಾಯ್ ಸಾಥ್ ನೀಡಿ, ಸಪೋರ್ಟ್ ಮಾಡುತ್ತಿದ್ದಾರೆ. ಈ ಮೂಲಕ ಕೆಜಿಎಫ್ ಬಳಿಕ ಯಶ್ ಮುಂದಿನ ಚಿತ್ರ ಯಾರೊಂದಿಗೆ ಎಂಬುದರ ಬಗ್ಗೆ ಸಿಕ್ರೇಟ್ ರಿವೀಲ್ ಆಗಿದೆ.

ಯಶ್ ಮುಂದಿನ ಚಿತ್ರವನ್ನ ನಿರ್ದೇಶಿಸಲು ಹೊರಟಿರುವ ನಿರ್ದೇಶಕ ಬೇರೆ ಯಾರೂ ಅಲ್ಲ, ಸೂಪರ್ ಹಿಟ್ ಮಫ್ತಿ ಸಿನಿಮಾ ಕೊಟ್ಟ ನಿರ್ದೇಶಕ ನರ್ತನ್.

ಎಸ್.. ಶಿವಣ್ಣ ಮತ್ತು ಮುರುಳಿ ಕಾಂಬಿನೇಷನ್‌ನಲ್ಲಿ ಕಮಾಲ್ ಮಾಡಿದ್ದ ಮಫ್ತಿ ಸಿನಿಮಾದ ಡೈರೆಕ್ಟರ್ ನರ್ತನ್ ಯಶ್ ಮುಂದಿನ ಸಿನಿಮಾವನ್ನ ಪ್ಯಾನ್ ಇಂಡಿಯನ್ ಲೆವಲ್‌ನಲ್ಲಿ ಡೈರೆಕ್ಟ್ ಮಾಡಲಿದ್ದಾರೆ.

ಲಾಕ್‌ಡೌನ್‌ನಲ್ಲಿ ಈ ಬಗ್ಗೆ ಯಶ್‌ರೊಂದಿಗೆ ಮಾತುಕತೆ ನಡೆಸಿರುವ ನರ್ತನ್, ಲಾಕ್‌ಡೌನ್ ಟೈಮ್ ಸಿಕ್ಕಾಗ ಸ್ಕ್ರಿಪ್ಟ್ ಬರೆದಿದ್ದಾರೆ. ಸದ್ಯ ಕೆಜಿಎಫ್ ಪಾರ್ಟ್ 2 ಸೇರಿ ಕೆಲ ಸಿನಿಮಾದಲ್ಲಿ ಬ್ಯುಸಿ ಇರುವ ಯಶ್, ನಂತರ ನರ್ತನ್ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ.

ಕೆಜಿಎಫ್ ಪಾರ್ಟ್‌2 ಚಿತ್ರದ ಶೂಟಿಂಗ್ ಬಾಕಿ ಇದ್ದು, ಸರ್ಕಾರ ಅನುಮತಿ ನೀಡಿದ ಬಳಿಕ ಚಿತ್ರತಂಡ ಶೂಟಿಂಗ್ ಶುರು ಮಾಡಲಿದೆ. ಇದೇ ವರ್ಷ ಕೆಜಿಎಫ್ ಸಿಕ್ವೇಲ್ ರಿಲೀಸ್ ಆಗುವ ಸಾಧ್ಯತೆ ಇದೆ.

- Advertisement -

Latest Posts

Don't Miss