ಟ್ರಂಪ್ ಹೊಸ ನೀತಿಯಿಂದ ಭಾರತಕ್ಕೆ ಮತ್ತೊಂದು ಶಾಕ್!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೊಸ ಘೋಷಣೆಯ ಮೂಲಕ ಭಾರತೀಯರಿಗೆ ಮತ್ತೊಂದು ಆರ್ಥಿಕ ಹೊಡೆತ ನೀಡಿದ್ದಾರೆ. ಹೆಚ್ಚು ನುರಿತ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುವ H-1B ವೀಸಾದ ಮೇಲೆ ವಾರ್ಷಿಕ ಸುಮಾರು ₹88 ಲಕ್ಷ ವೀಸಾ ಶುಲ್ಕ ವಿಧಿಸುವ ಪ್ರಸ್ತಾವನೆಗೆ ಸಹಿ ಹಾಕಿದ್ದಾರೆ.

ಈ ಹೊಸ ನೀತಿ ಜಾರಿಗೆ ಬಂದರೆ, ಅಮೆರಿಕದ ಟೆಕ್ ಕಂಪನಿಗಳಲ್ಲಿ ಉದ್ಯೋಗಕ್ಕೆ ಆಸಕ್ತನಾಗಿರುವ ನೂರಾರು ಭಾರತೀಯ ತಂತ್ರಜ್ಞರು ಮತ್ತು ಐಟಿ ಉದ್ಯೋಗಿಗಳಿಗೆ ದೊಡ್ಡ ಆರ್ಥಿಕ ಬಾಧೆಯಾಗಲಿದೆ. ಇತ್ತೀಚಿನ ವಾಣಿಜ್ಯ ನೀತಿಯ ಪ್ರಕಾರ, ತಂತ್ರಜ್ಞಾನ ಕ್ಷೇತ್ರದಲ್ಲಿ ಕಡಿಮೆ ಸಂಬಳದಲ್ಲಿ ನುರಿತ ಕೆಲಸಗಾರರನ್ನು ಸೇರಿಸಿಕೊಳ್ಳುತ್ತಿರುವ ಕಂಪನಿಗಳಿಗೆ ಪ್ರತಿವರ್ಷದವರೆಗೆ ಒಂದು ಲಕ್ಷ ಡಾಲರ್ ಪಾವತಿಸುವ ಸಂಕಷ್ಟ ಬರಲಿದೆ.

ಇದನ್ನು ಸಮರ್ಥಿಸಿಕೊಂಡ ಟ್ರಂಪ್ ಅಮೆರಿಕದ ಉದ್ಯೋಗಿಗಳ ಮೊದಲು ಇದು ನಮ್ಮ ನಿಲುವು. ಇಂತಹ ಶುಲ್ಕಗಳನ್ನು ದೊಡ್ಡ ಕಂಪನಿಗಳು ಸಹಿಸಬಲ್ಲವು ಎಂದು ತಿಳಿಸಿದ್ದಾರೆ. ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರು ಇದು ಎಲ್ಲಾ ದೊಡ್ಡ ಟೆಕ್ ಕಂಪನಿಗಳಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕ್ರಮವು ರಷ್ಯಾ ಮತ್ತು ಇರಾನ್‌ ಜೊತೆಗಿನ ವ್ಯವಹಾರಗಳಲ್ಲಿ ಭಾರತದ ಸ್ವತಂತ್ರ ನಿರ್ಣಯಗಳನ್ನು ಅಮೆರಿಕ ಹುಮ್ಮಸ್ಸಿನಿಂದ ಹತ್ತಿಕ್ಕಲು ಮತ್ತೊಂದು ಹಂತವಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇತ್ತೀಚೆಗೆ ಅಮೆರಿಕ ಚಬಹಾರ್ ಬಂದರು ಯೋಜನೆಗೆ ನೀಡಿದ್ದ ನಿರ್ಬಂಧ ವಿನಾಯಿತಿಯನ್ನು ರದ್ದುಗೊಳಿಸಿದೆ. ಇದೀಗ H-1B ವೀಸಾ ಶುಲ್ಕ ಏರಿಕೆಯು ಮತ್ತೊಂದು ಧಕ್ಕೆಯಾಗಿ ಪರಿಣಮಿಸಿದೆ.

ಟ್ರಂಪ್ ಪ್ರಕಟಿಸಿದ ಹೊಸ H-1B ವೀಸಾ ಶುಲ್ಕ ನೀತಿ, ಭಾರತೀಯ ಐಟಿ ಉದ್ಯೋಗಿಗಳಿಗೆ ಭಾರೀ ಆರ್ಥಿಕ ಒತ್ತಡ ಉಂಟುಮಾಡಲಿದೆ. ಅಮೆರಿಕದ ಉದ್ಯೋಗ ಮಾರುಕಟ್ಟೆಯಲ್ಲಿ ಭಾರತೀಯ ತಜ್ಞರ ಪಾಲು ಕಡಿಮೆಯಾಗುವ ಅಪಾಯವಿದೆ. ಈ ನಡುವೆ ಟ್ರಂಪ್ ರಾಜಕೀಯ ಉದ್ದೇಶದಿಂದ ಭಾರತವನ್ನೇ ಗುರಿಯಾಗಿಸುತ್ತಿರುವ ಅಪಾಯದ ಸೂಚನೆಗಳು ಹಬ್ಬುತ್ತಿರುವುದು ಗಮನಾರ್ಹ.

ವರದಿ : ಲಾವಣ್ಯ ಅನಿಗೋಳ

About The Author