BREAKING: ಬೆಂಗಳೂರಿನಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಕೃತ್ಯ: ಸ್ನೇಹಿತನಿಂದ, ಸ್ನೇಹಿತನ ಮೇಲೆ ಆ್ಯಸಿಡ್ ದಾಳಿ

ಬೆಂಗಳೂರು: ನಗರದಲ್ಲಿ ಈಗಾಗಲೇ ಯುವತಿಯ ಮೇಲೆ ನಡೆದಂತ ಆ್ಯಸಿಡ್ ದಾಳಿ ಹಸಿಯಾಗಿರೋವಾಗಲೇ, ಸ್ನೇಹಿತನಿಂದ, ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ ನಡೆಸಿರೋ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಕಬ್ಬನ್ ಪೇಟೆಯ 10ನೇ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲಕ ಜನತಾ ಅದಕ್ ಎಂಬಾತ, ತನ್ನ ಸ್ನೇಹಿತನ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಭಾನುವಾರ ನಡೆದಂತ ಗಲಾಟೆಯಿಂದ ಕುಪಿತಗೊಂಡು ಡೈಲುಟ್ ಸೆಲ್ಫುರಿಕ್ ಆ್ಯಸಿಡ್ ಅನ್ನು ಸ್ನೇಹಿತ ಮೇಲೆ ಎರಚಿ ಪರಾರಿಯಾಗಿದ್ದಾನೆ.

ಆ್ಯಸಿಡ್ ದಾಳಿಯಿಂದಾಗಿ ಶೇ.30ರಷ್ಟು ಮುಖ, ಎದೆ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಜನತಾ ಅದಕ್ ಎಂಬಾತನನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ.

About The Author