Tuesday, April 22, 2025

Latest Posts

ಕನ್ನಡ ಬಿಗ್‌ಬಾಸ್‌ ಶೋಗೆ ಮತ್ತೊಂದು ಸಂಕಷ್ಟ: ಸ್ಟಾಪ್ ಆಗತ್ತಾ ರಿಯಾಲಿಟಿ ಶೋ..?

- Advertisement -

Bigg Boss News: ಕನ್ನಡ ಬಿಗ್‌ಬಾಸ್ ಸೀಸನ್ 11ನಲ್ಲಿ ಮನೆಮಂದಿ ಟಾಸ್ಕ್ ಆಡಿ ಸದ್ದು ಮಾಡೋದಕ್ಕಿಂತ ಜಗಳವಾಗಿ, ಹೊಡೆದಾಡಿಕೊಂಡು, ಅಶ್ಲೀಲವಾಗಿ ಬೈದುಕೊಂಡು ಸುದ್ದಿಯಾಗುತ್ತಿದ್ದಾರೆ.

ಈ ಮೊದಲು ಸ್ವರ್ಗ- ನರಕ ಎಂಬ ಕಾನ್ಸೆಪ್ಟ್‌ನಲ್ಲಿ ಶೋ ನಡೆಯುತ್ತಿತ್ತು. ಆದರೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಮಹಿಳಾ ಆಯೋಗ ದೂರು ನೀಡಿದ ಕಾರಣ, ಎಲ್ಲರೂ ಒಂದೇ ರೀತಿ ಇರುವಂತೆ ಮಾಡಲಾಯಿತು. ಇದೀಗ ಓರ್ವ ವ್ಯಕ್ತಿ ಬಿಗ್‌ಬಾಸ್ ಶೋ ನಿಲ್ಲಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಹೀಗಾಗಿ ಬಿಗ್‌ಬಾಸ್‌ಗೆ ಶಿವಮೊಗ್ಗ ನ್ಯಾಯಾಲಯರಿಂದ ನೋಟೀಸ್ ಜಾರಿಯಾಗಿದೆ. ಬಿಗ್‌ಬಾಸ್‌ ಶೋವನ್ನು ಪರ್ಮ್‌ನೆಂಟ್ ಆಗಿ ನಿಲ್ಲಿಸುವಂತೆ ಸಾಗರ ನ್ಯಾಯಾಲಯದ ವಕೀಲರಾದ ಕೆ.ಎಲ್.ಭೋಜರಾಜ್ ಎಂಬುವವರು ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅಲ್ಲದೇ, ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗುತ್ತಿದೆ ಎಂದು ಈ ಮೊದಲು ದೂರು ದಾಖಲಾಗಿರುವ ಕಾರಣಕ್ಕೆ, ಬಿಗ್‌ಬಾಸ್ ಶೋವನ್ನು ಖಾಯಂ ಆಗಿ ನಿಲ್ಲಿಸಬೇಕು ಎಂದು ದೂರು ನೀಡಲಾಗಿದೆ.

- Advertisement -

Latest Posts

Don't Miss