ಈಗ ಎಲ್ಲೆಲ್ಲೂ ಮಾತಿನ ಮಲ್ಲಿ ಆ್ಯಂಕರ್ ಅನುಶ್ರೀ ಅವರ ಮದುವೆಯ ಸುದ್ದಿಯೇ ಹರಿದಾಡುತ್ತಿದೆ. ಇದುವರೆಗೆ ಅವರು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಇದು ನಿಜವೇ ಆಗಿದ್ದಲ್ಲಿ, ಆ್ಯಂಕರ್ ಅನುಶ್ರೀ ಅವರು ಸದ್ಯ ಮದುವೆಯ ಮೂಡ್‌ನಲ್ಲಿ ಇದ್ದಾರೆ. ಅಷ್ಟಕ್ಕೂ ಅನುಶ್ರೀ ಎಂದರೆ ಸಾಕು, ಅವರ ಅಭಿಮಾನಿಗಳಿಗೆ ಒಂದೇ ಚಿಂತೆ. ಅದು ಅವರ ಮದುವೆಯ ಬಗ್ಗೆಯಾಗಿತ್ತು.
ಇದೇ ವರ್ಷ ತಮ್ಮ ಮದುವೆ ಆಗುತ್ತದೆ ಈ ವರ್ಷ ಅನುಪತಿ ಬಂದೇ ಬರ್ತಾನೆ ಎನ್ನುವ ಮೂಲಕ, ಹಲವು ವರ್ಷಗಳಿಂದ ಅಭಿಮಾನಿಗಳು ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಟ್ಟಿದ್ದರು. ಅದೇ ರೀತಿ ಇತ್ತೀಚಿಗೆ ಅನುಶ್ರೀ ಅವರ ಮದುವೆ ಆಗಸ್ಟ್ 28ರಂದು ಮದುವೆಯಾಗುತ್ತಿರುವುದಾಗಿ ಹೇಳಲಾಗಿದೆ. ಅವರ ಹುಡುಗನ ಬಗ್ಗೆಯೂ ಇದಾಗಲೇ ರಿವೀಲ್ ಆಗಿದೆ.
ಇದೀಗ ಮಹಾನಟಿ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಅನುಶ್ರೀ ಅವರು ಭಾವಿ ಪತಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಿದ್ದಾರೆ. ರಮೇಶ್ ಅವರು ತಮ್ಮ ಪತ್ನಿಯ ಬಗ್ಗೆ ಗುಣಗಾನ ಮಾಡಿದರು. ನನ್ನ ಲೈಫ್ನಲ್ಲಿ ಸಿಕ್ಕ ಅತಿ ದೊಡ್ಡ ಲಾಟರಿ ಎಂದರೆ ಅರ್ಚನಾ ಎಂದು I Love You ಎಂದರು. ಬಳಿಕ ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಅವರು, ಅನುಶ್ರೀ ಅವರಿಗೆ ನೀವು ಪ್ರಪೋಸ್ ಮಾಡಿದ್ರೆ ಹೇಗೆ ಮಾಡಬಹುದು ಎಂದು ಅನುಶ್ರೀ ಅವರನ್ನು ಪ್ರಶ್ನಿಸಿದರು.
ಅನುಶ್ರೀ ನಾಚುತ್ತಲೇ ಬೇಡ ಬೇಡ ಎಂದರು. ಆದರೆ ಅಲ್ಲಿಗೆ ಅರ್ಧಚಂದ್ರನನ್ನು ವೇದಿಕೆ ಮೇಲೆ ಧರೆಗೆ ಇಳಿಸಲಾಯಿತು. ಆಗ ನೀವು ಪ್ರಪೋಸ್ ಮಾಡಿ ಎಂದು ತರುಣ್ ಸುಧೀರ್ ಹೇಳಿದರು. ಅನುಶ್ರೀ ಅವರು ನಾಚುತ್ತಲೇ ಇದುವರೆಗೆ ನನ್ನ ಜೀವನದಲ್ಲಿ ಅರ್ಧಚಂದ್ರ ಇತ್ತು. ಪೂರ್ಣಚಂದ್ರನಾಗಿ ಬೇಗ ಬಾ ಐ ಲವ್ ಯು ಎಂದಿದ್ದಾರೆ. ಇವರು ಮದುವೆಯಾಗುವ ಹುಡುಗನ ಹೆಸರು ರೋಷನ್ ಎಂದು ಹೇಳಲಾಗುತ್ತಿದ್ದರೂ, ಇದೀಗ ಭಾವಿ ಪತಿಯ ಹೆಸರು ಪೂರ್ಣಚಂದ್ರ ಇರಬಹುದೇ ಎನ್ನುವ ಚರ್ಚೆ ಕೂಡ ಶುರುವಾಗಿದೆ.
ಒಟ್ಟಿನಲ್ಲಿ ನೇರವಾಗಿ ಏನನ್ನೂ ಹೇಳದ ಆ್ಯಂಕರ್ ಅನುಶ್ರೀ ಅವರು, ಮದುವೆಯ ದಿನವೇ ಬಹಿರಂಗಪಡಿಸುವ ಉದ್ದೇಶದಲ್ಲಿ ಇದ್ದಂತಿದೆ. ಆಗಸ್ಟ್ 18ಕ್ಕೆ ಮದುವೆ ಎಂದು ಹೇಳಲಾಗುತ್ತಿದ್ದರೂ, ಇದು ನಿಜ ಹೌದೋ ಅಲ್ಲವೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ