ನವದೆಹಲಿ: ಸಾಲಗಾರರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಯಾವುದೇ ಬ್ಯಾಂಕ್ ಗಳು ಬೌನ್ಸರ್ ಗಳನ್ನು ನೇಮಕ ಮಾಡಿಕೊಳ್ಳೋದಕ್ಕೆ ಅಧಿಕಾರವಿಲ್ಲ ಅಂತ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಇಂದು ಲೋಕಸಭೆಗೆ ತಿಳಿಸಿದ್ದಾರೆ.
ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅನುರಾಗ್ ಠಾಕೂರ್, ನೀಡಿದ ಸಾಲ ಮರುಪಾವತಿಗಾಗಿ ಬ್ಯಾಂಕ್ ಗಳು ಸಾಲಗಾರರೊಂದಿಗೆ ದುರ್ವರ್ತನೆ ತೋರೋದು ಸರಿಯಲ್ಲ. ಇದಕ್ಕಾಗಿ ಆರ್ ಬಿಐ ಮಾರ್ಗಸೂಚಿಗಳನ್ನು ಹೊರಡಿಸಿದೆ ಆದ್ರೆ ಇದನ್ನು ದೇಶದ ಹಲವಾರು ಬ್ಯಾಂಕ್ ಗಳು ಉಲ್ಲಂಘಿಸುತ್ತಿದ್ದು ಈ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಸಾಲಗಾರರಿಗೆ ಅನಗತ್ಯ ಕಿರಿಕಿರಿ ಉಂಟುಮಾಡುವಂತೆ ಅವರ ಮನೆಗಳ ಬಳಿ ಸಮಯವಲ್ಲದ ಸಮಯದಲ್ಲಿ ಬೌನ್ಸರ್ ಗಳ ಮೂಲಕ ಬ್ಯಾಂಕ್ ಗಳು ಸಾಲ ವಸೂಲಾತಿಗೆ ಇಳಿದಿವೆ ಅಂತ ಹೇಳಿದ್ರು.

ಅಲ್ಲದೆ ತನ್ನ ನಿಗದಿತ ಟಾರ್ಗೆಟ್ ತಲುಪಲು ಬ್ಯಾಂಕ್ ನಿಂದನೀಯ ಮಾರ್ಗಗಳನ್ನು ಅನಸುಸರಿಸುತ್ತಿದ್ದು ಇನ್ನು ಮುಂದೆ ಇಂತಹ ಬ್ಯಾಂಕ್ ಗಳ ವಿರುದ್ಧದ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತೆ ಅಂತ ಆರ್ ಬಿಐ ಎಚ್ಚರಿಸಿದೆ ಅಂತ ಇದೇ ವೇಳೆ ಅನುರಾಗ್ ಠಾಕೂರ್ ಹೇಳಿದ್ರು. ಇದನ್ನೂ ಮೀರಿದರೆ ನಿರ್ದಿಷ್ಟ ಸಮಯದವರೆಗೂ ನಿರ್ದಿಷ್ಟ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿದ ಬ್ಯಾಂಕ್ ಗಳು ಸಾಲ ಮರುಪಾವತಿ ಮಾಡದಂತೆ ಆರ್ ಬಿಐ ತಡೆಯೊಡ್ಡಲಿದೆ ಅಂತ ಅನುರಾಗ್ ಠಾಕೂರ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಬಳಿ 10 ರೂಪಾಯಿ ಕಾಯಿನ್ ಇದ್ಯಾ..? ಡೋಂಟ್ ವರಿ ಈ ವಿಡಿಯೋ ಮಿಸ್ ಮಾಡದೇ ನೋಡಿ