www.karnatakatv.net :ಬೆಂಗಳೂರು : ಮಂಗಳೂರು ಡ್ರಗ್ಸ್ ಪ್ರಕರಣ ಕುರಿತಂತೆ ಚಾರ್ಜ್ ಶೀಟ್ ನಲ್ಲಿ ನಟಿ, ನಿರೂಪಕಿ ಅನುಶ್ರೀ ಹೆಸರಿದೆ ಅನ್ನೋ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಎಲ್ಲೆಲ್ಲೂ ಇದೇ ಸುದ್ದಿ. ಇನ್ನು ಈ ವಿಚಾರ ತಿಳಿದು ಹೆದರಿ ಅನುಶ್ರೀ ಮುಂಬೈಗೆ ಹಾರಿದ್ದಾರೆ ಎನ್ನೋ ಕುರಿತು ಇವತ್ತು ಖುದ್ದು ಅನುಶ್ರೀ ಮಾಧ್ಯಮದ ಮುಂದೆ ಬಂದು ಸ್ಪಷ್ಟನೆ ನೀಡಿದ್ರು.
ಹೌದು, ನಿನ್ನೆ ಮೊನ್ನೆಯಿಂದ ನಟಿ ಅನುಶ್ರೀ ಬಗ್ಗೆ ಕೇಳಿಬರ್ತಿರೋ ಆರೋಪಗಳಿಗೆಲ್ಲಾ ಇವತ್ತು ಸ್ವತಃ ಅನುಶ್ರೀ ಸ್ಪಷ್ಟನೆ ನೀಡಿದ್ರು. ನನ್ನ ಮೇಲೆ ಆರೋಪಿಗಳು ಮಾಡಿರೋ ಆರೋಪಗಳೆಲ್ಲಾ ಸುಳ್ಳು. ಯಾರು ಏನೇ ಆರೋಪ ಮಾಡಿದ್ರೂ ನಾನು ತಲೆಕೆಡಿಸಿಕೊಳ್ಳೋದಿಲ್ಲ, ಈಗಾಗಲೇ ಸಿಸಿಬಿ ವಿಚಾರಣೆಗೆ ನಾನು ಹಾಜರಾಗಿ ತನಿಖಾ ತಂಡ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದ್ದೇನೆ ಅಂತ ಅನುಶ್ರೀ ತಿಳಿಸಿದ್ರು.
ಇನ್ನು ಆರೋಪಗಳು ಕೇಳಿಬಂದ ನಂತರ ಮುಂಬೈಗೆ ಹಾರಿದ್ದಾಗಿ ಕೇಳಿಬಂದ ಸುದ್ದಿ ಕುರಿತಾಗಿ ಮಾತನಾಡಿದ ಅನುಶ್ರೀ ಸೋಮವಾರದಂದು ನಾನು ಕೆಲಸದ ಮೇಲೆ ಮುಂಬೈಗೆ ತೆರಳಿದ್ದು ನಿಜ ಆದ್ರೆ ಅಂದೇ ನಾನು ಮರಳಿ ಟಿಕೆಟ್ ಕೂಡ ಮಾಡಿಸಿದ್ದೆ. ಇದು ನನ್ನ ನೆಲ, ಯಾರು ಏನೇ ಹೇಳಿದ್ರೂ ನಾನು ಇಲ್ಲೇ ಇರುತ್ತೇನೆ. ಎಲ್ಲಿಗೂ ಓಡಿಹೋಗೋದಿಲ್ಲ ಅಂತ ಹೇಳಿದ್ರು.
ಇನ್ನು ಸಿಸಿಬಿ ವಿಚಾರಣೆ ಕುರಿತಾಗಿ ಕೇಳಿದ ಪ್ರಶ್ನೆಗಳು ಮತ್ತು ನಾನು ಹೇಳಿದ ಉತ್ತರಗಳ ಬಗ್ಗೆ ಎಲ್ಲಾ ನಾನು ಹೇಳಿಕೊಳ್ಳೋದಕ್ಕೆ ಸಾಧ್ಯವಿಲ್ಲ. ಆರೋಪಿಗಳ ಪರಿಚಯದ ಕುರಿತಾಗಿ ಅಷ್ಟೇ ನನಗೆ ಸಿಸಿಬಿ ಅಧಿಕಾರಿಗಳು ಪ್ರಶ್ನಿಸಿದ್ರು. ಇನ್ನು ಆರೋಪಿಗಳು ಯಾವ ಆರೋಪಗಳನ್ನಾದ್ರೂ ಮಾಡಲಿ ನಾನು ಅದನ್ನ ನಿಭಾಯಿಸುತ್ತೇನೆ ಅಂತ ಅನುಶ್ರೀ ಆತ್ಮವಿಶ್ವಾಸದಿಂದ ಉತ್ತರಿಸಿದ್ರು.
ಕರ್ನಾಟಕ ಟಿವಿ- ಬೆಂಗಳೂರು