ಹಾಸನ :ಜೈಲನಲ್ಲಿರುವ ಖೇದಿಗಳಿಗೆ ಮಾಧಕ ವಸ್ತುಗಳು ಯಾವ ರೀತಿ ಬಂದು ಸೇರುತ್ತವೆ ಎನ್ನುವುದರ ಜಅಲ ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ತಿಳಿದು ಬಂದಿರುವ ಶಾಕ್ ಸಂಗತಿ ಇಲ್ಲಿದೆ ನೋಡಿ.
ಜೈಲಿನೊಳಗೆ ಮಾಧಕ ವಸ್ತುಗಳಸಾಗಾಟದ ಜಾಲ ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ಇಬ್ಬರು ಖೈದಿಗಳು ಸಿಕ್ಕಿಬಿದ್ದಿದ್ದಾರೆ. ಅವರ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ.ಅಂಬೇಡ್ಕರ್ ನಗರದ ತರಕಾರಿ ವ್ಯಾಪಾರಿ ಆಗಿರುವ ತಬ್ರೇಜ್ (28) ಮತ್ತು ಗುಜರಿ ಅಂಗಡಿಯ ವ್ಯಾಪಾರಿ ವಾಸಿಂ(21) ಎನ್ನುವ ಇಬ್ಬರು ಸ್ನೇಹಿತರು ಜೈಲಿನಲ್ಲಿರುವ ಖೇದಿಗಳಿಗೆ ಗಾಂಜಾ ಸಾಗಾಟ ಮಾಡಲು ಸೇಬು ಮತ್ತು ಮೋಸಂಬಿ ಹಣ್ಣುಗಳನ್ನು ಬಳೆಸುತ್ತಿದ್ದರು. ಹಣ್ಣುಗಳನ್ನು ಕತ್ತರಿಸಿ ಅದರೊಳಗೆ ಗಾಂಜಾ ಪ್ಯಾಕೇಟ್ಗಳನ್ನು ಇಟ್ಟು ಗುರುತು ಸಿಗದ ಹಾಗೆ ಮೇಲ್ಗಡೆ ಸ್ಟಿಕರ್ ಅಂಟಿಸುತ್ತಿದ್ದರು. ಎಂದು ತಿಳಿಸಿದ್ದಾರೆ.
ಇನ್ನು ಇವುಗಳನ್ನು ಖೈದಿಗಳಿಗೆ ಹೇಗೆ ತಲುಪಿಸುತ್ತೀರಿ ಎನ್ನುವ ಪ್ರಶ್ನೆಗೆ ; ಜೈಲಿನ ಹಿಂದೆ ಇರುವ ಹಳೆ ಬಸವಣ್ಣ ದೇವಸ್ಥಾನದ ಕಾಂಪೌಂಡ್ ಮೂಲಕ ಎಸೆಯುತ್ತಿದ್ದರು. ಇದೇ ರೀತಿ ಭಾನುವಾರ ಮದ್ಯಾಹ್ನ ಗಾಂಜಾ ಸೊಪ್ಪನ್ನು ಸಾಗಿಸುವ ಸಲುವಾಗಿ ಜೈಲಿನ ಕಾಂಪೌಂಡ್ ಹಿಂದಿರುವ ದೇವಸ್ಥಾನದ ಅಕ್ಕ ಪಕ್ಕದಲ್ಲಿ ಓಡಾಡುತ್ತಿರುವ ವೇಳೆ ಪೊಲೀಸರು ಅನುಮಾನಿಸಿ ಕರೆದು ವಿಚಾರಣೆ ನಡೆಸಿದಾಗ ವಿಷಯ ತಿಳಿದು ಬಂದಿದೆ ನಂತರ ಅವರನ್ನು ಬಂದಿಸಲಾಗಿದೆ. ಬ್ಯಾಗನ್ನು ವಶಕ್ಕೆ ಪಡೆದು ಚೆಕ್ ಮಾಡಿದಾಗ ಗಾಂಜಾ ತುಂಬಿದ 3 ಸೇಬು ಮತ್ತುಎರಡು ಮೂಸಂಬಿ ಹಣ್ಣುಗಳು ಪತ್ತೆಯಾಗಿವೆ.
ಜೈಲು ಸುತ್ತಮುತ್ತ ನಿಗಾ:ಇದೇ ವರ್ಷದಲ್ಲಿ ಜಿಲ್ಲಾ ಉಪಕಾರಾಗೃಹದ ಮೇಲೆ ಪೊಲೀಸರು ಎರಡು ಬಾರಿ ದಾಳಿ ನಡೆಸಿ ಗಾಂಜಾ, ಮಾದಕವಸ್ತು, ಮಾರಕಾಸ್ತ್ರ, ಮೊಬೈಲ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ಮೇಲಾಧಿಕಾರಿಗೆ ವರದಿ ನೀಡಿದ್ದರಿಂದ ಜೈಲಿನ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಇದಾದ ಬಳಿಕ ಜೈಲಿನ ಸುತ್ತಮುತ್ತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಜೈಲಿನೊಳಗೆ ಇರುವ ಕೈದಿಗಳಿಗೆ ಅವರ ಪರಿಚಯಸ್ಥರು ಜೈಲಿನ ಹಿಂಭಾಗದಲ್ಲಿರುವ ಸ್ಲಂ ನಿಂದ ಬೀಡಿ, ಸಿಗರೇಟ್, ಗಾಂಜಾ, ಗುಟ್ಕಾ ಸೇರಿ ಮಾದಕ ವಸ್ತುಗಳನ್ನು ಕಾಂಪೌಂಡ್ ಮೇಲಿಂದ ಎಸೆಯುತ್ತಿದ್ದರು. ಈ ಬಗ್ಗೆ ಸಾಕಷ್ಟು ದೂರುಗಳು ಬಂದರೂ ಆರೋಪಿಗಳನ್ನು ಹಿಡಿಯಲು ಅಷ್ಟಾಗಿ ಯಾರೂ ಆಸಕ್ತಿ ವಹಿಸಿರಲಿಲ್ಲ. ಇದೀಗ ಕಾರಾಗೃಹದೊಳಗೆ ವ್ಯಾಪಕವಾಗಿ ಮಾದಕವಸ್ತು ದೊರೆದ ಹಿನ್ನೆಲೆ ಪೊಲೀಸರು ಜೈಲಿನ ಸುತ್ತಮುತ್ತ ತೀವ್ರ ನಿಗಾವಹಿಸಿದ್ದಾರೆ.
National Highway: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ..!
BJP: ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೇ ಶುರುವಾಯ್ತಾ ರಾಜೀನಾಮೆ ಪರ್ವ?
Lokayukta: ಮಿನಿ ವಿಧಾನಸೌಧದ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ದಾಳಿ..!