ಬಾಗಲಕೋಟೆ: ತಾಲೂಕಿನ ಮುಗಳೊಳ್ಳಿ ತಾಂಡಾ ನಂ.2 ಮತ್ತು ಸೀತಿಮನಿ ತಾಂಡಾದಲ್ಲಿ ಹೊಸದಾಗಿ ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ಮಂಜೂರಾತಿ ನೀಡುವ ಸಲುವಾಗಿ ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಸಹಕಾರಿ ಸಂಘಗಳು ಕನಿಷ್ಠ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು, ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಟ 2 ಲಕ್ಷ ರೂ.ಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು. ಖಾಸಗಿ ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವದಿಲ್ಲ. ವಿಕಲಚೇತನ ಹಾಗೂ ತೃತೀಯ ಲಿಂಗದ ವ್ಯಕ್ತಿಗಳೆಂದು ದೃಢೀಕರಿಸುವ ಬಗ್ಗ ವೈದ್ಯಕೀಯ ಅಧಿಕಾರಿಗಳಿಂದ ಪಡೆದ ದೃಡೀಕರಣ ಪತ್ರ ಹಾಜರುಪಡಿಸಬೇಕು.
ಅರ್ಜಿ ನಮೂನೆಯನ್ನು ಬಾಗಲಕೋಟೆ ತಹಶೀಲ್ದಾರ ಕಚೇರಿಯಿಂದ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಮುಗಳೊಳ್ಳಿ ತಾಂಡಾದವರಿಗೆ ಜೂನ್ 8 ಮತ್ತು ಸೀತಿಮಿ ತಾಂಡಾದವರಿಗೆ ಜೂನ್ 10 ಕೊನೆಯ ದಿನವಾಗಿರುತ್ತದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




