ಹಾವೇರಿ: ದೀನದಯಾಳು ರಾಷ್ಟ್ರೀಯ ನಗರಜೀವನೋಪಾಯ(ಡೇ-ನಲ್ಮ) ಅಭಿಯಾನ ಯೋಜನೆಯಡಿ 2022-23 ಸಾಲಿಗೆ ವಿವಿಧ ಯೋಜನೆಗಳ ಸಾಲ ಸೌಲಭ್ಯ ಹಾಗೂ ಗುಂಪು, ರಚನೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವ್ಯಕ್ತಿ ಉದ್ಯಮಶೀಲತೆ ಸಾಲ, ಗುಂಪು ಉದ್ಯಮಶೀಲತೆ ಸಾಲ, ಸ್ವ ಸಹಾಯ ಗುಂಪುಗಳ ಕ್ರೆಡಿಟ್ ಲಿಂಕೇಜ್ ಸಾಲ, ಪಿ.ಎಂ.ಸ್ವ ನಿಧಿಯಲ್ಲಿ ಬೀದಿ ವ್ಯಾಪಾರಸ್ಥರಿಗೆ ಸಾಲ, ಪಿ.ಎಂ.ಎಫ್.ಎಂ.ಇ. ಅಡಿ ಸ್ವ ಸಹಾಯ ಸಂಘಗಳಿಗೆ ಸಾಲ, ಸ್ವ ಸಹಾಯ ಗುಂಪುಗಳ ರಚನೆ ಹಾಗೂ ಒಕ್ಕೂಟ ರಚನೆಗೆ ಹಾವೇರಿ ನಗರಸಭೆ ವ್ಯಾಪ್ತಿಯ 18 ರಿಂದ45 ವರ್ಷದೊಳಗಿನ ನಿರುದ್ಯೋಗಿ ಯುವಕ ಮತ್ತು ಯುವತಿಯರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ವಾರ್ಷಿಕಾದಾಯ ಪತ್ರ,ಬ್ಯಾಂಕ್ ಪಾಸ್ ಪುಸ್ತಕಝರಾಕ್ಸ್ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ನಗರಸಭೆಯ ಬಡತನ ನಿರ್ಮೂಲನಾ ವಿಭಾಗದಲ್ಲಿ ಸಮುದಾಯ ಸಂಪರ್ಕಾಧಿಕಾರಿ ಹಾಗೂ ಸಮುದಾಯ ಸಂಘಟಕರಿಗೆ ದಿನಾಂಕ15-08-2022ರೊಳಗಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ www.havericity.gov.in ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.




