ಹಾವೇರಿ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಅರಸೆಟಿ ಹಾಗೂ ಜೆಸಿಬಿ ಇಂಡಿಯಾ ಸಹಯೋಗದಲ್ಲಿ 30 ದಿನಗಳ ಉಚಿತ ಜೆಸಿಬಿ ಆಪರೇಟರ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು 18 ರಿಂದ45 ವರ್ಷದೊಳಗಿರಬೇಕು. ಎಸ್.ಎಸ್.ಎಲ್.ಸಿ.ಉತ್ತೀರ್ಣರಾಗಿರಬೇಕು. ಹೆಸರು, ಜನ್ಮದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿ ಅವಶ್ಯಕತೆ,ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಭರ್ತಿಮಾಡಿದ ಅರ್ಜಿಯನ್ನು ಜುಲೈ 25ರೊಳಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಅರಸೆಟಿ, ವಿಸ್ತರಣಾ ಕೇಂದ್ರ ಹಸನಮಾಳ, ದಾಂಡೇಲಿ-581325 ಈ ವಿಳಾಸಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.08284-298547, ಮೊ.6363429889, 9449782425 ಸಂಪರ್ಕಿಸಲು ಕೋರಲಾಗಿದೆ.




