www.karnatakatv.net: ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 5ನೇ ದಿನದ ಹಾಲು ತುಪ್ಪದ ಕಾರ್ಯವನ್ನು ನೇರವೇರಿಸಲಾಗಿದೆ.
ನಂತರ ರಾಘವೇಂದ್ರ ರಾಜಕುಮಾಋ ಮಾತನಾಡಿ, ”ಅಪ್ಪು ಇನ್ನೂ ನಮ್ಮ ಜೊತೆ ಇಲ್ಲ ಎಂದು ಹೇಳುವುದು ಅತ್ಯಂತ ದುಃಖ ತರುತ್ತದೆ. ಆದರೆ ಆ ದುಃಖದಲ್ಲೇ ಜೀವನ ಸಾಗಿಸಬೇಕಾಗಿದೆ. ಪುನೀತ್ ಇರುವ ಅವಧಿಯಲ್ಲೇ ಎಲ್ಲಾ ಕೆಲಸಗಳನ್ನೂ ಮಾಡಿ ಹೋಗಿದ್ದಾನೆ. ಅಪ್ಪಾಜಿಗೆ ದೇವರು 76 ವರ್ಷ ಕೊಟ್ಟು, ಅಪ್ಪುಗೆ 46 ವರ್ಷ ಕೊಟ್ಟಿದಾನೆ. ಅಪ್ಪು ಕಣ್ಣುಗಳು ನಾಲ್ಕು ಜನರಿಗೆ ಬೆಳಕು ಕೊಟ್ಟಿದೆ. ತಂದೆಯವರ ಕಣ್ಣುಗಳು ಇಬ್ಬರಿಗೆ ಬೆಳಕು ಕೊಟ್ಟಿದ್ದವು” ಎಂದು ಹೇಳಿದರು.
ಶಾಂತರೀತಿಯಿoದ ಎಲ್ಲಾ ಕಾರ್ಯಗಳು ಸಾಗಿದ್ದಕ್ಕೆ ಸರ್ಕಾರ ಹಾಗೂ ಅಭಿಮಾನಿ ವೃಂದಕ್ಕೆ ರಾಘವೇಂದ್ರ ರಾಜಕುಮಾರ್ ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಅವರು ಸಾರ್ವಜನಿಕ ದರ್ಶನಕ್ಕೆ ಇಂದೇ ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಇನ್ನು ಈ ಸ್ಥಳದಲ್ಲಿ ಆಗಮಿಸಿದ ಸಚಿವ ಗೋಪಾಲಯ್ಯ ಮಾತನಾಡಿ, ‘ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಂಪೂರ್ಣವಾಗಿ ಸಹಕಾರವನ್ನು ನೀಡಿದ್ದಾರೆ. ಇದು ನನ್ನಕ್ಷೇತ್ರವಾಗಿದ್ದರಿಂದ ಇದರಲ್ಲಿ ನನ್ನ ಜವಾಬ್ದಾರಿ ಕೂಡಾ ಆಗಿದೆ. ಅಪ್ಪು ಜೊತೆ ನಾವು ಆತ್ಮಿಯತೆಯಿಂದ ಇದ್ದು, ಇಂದು 5ನೇ ದಿನದ ಹಾಲು ತುಪ್ಪ ಕಾರ್ಯವನ್ನು ನಡೆಸಿದರು. ಹಾಗೇ ಇಂದು ಅಭಿಮಾನಿಗಳಿಗೆ ದರ್ಶನ ಪಡೆಯಲು ಅವಕಾಶ ಇದೆ’ ಎಂದು ಹೇಳಿದರು.




