Saturday, December 21, 2024

Latest Posts

“ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ…” : ಅರವಿಂದ್ ಲಿಂಬಾವಳಿ

- Advertisement -

Banglore News:

ಮಳೆ ಅನಾಹುತ ಪ್ರದೇಶ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡಿದ ಶಾಸಕ ಅರವಿಂದ ಲಿಂಬಾವಳಿ ಇದ್ದಕ್ಕಿದ್ದಂತೆ  ಮಹಿಳೆ ಮೇಲೆ  ಗುಡುಗಿದ್ದಾರೆ. ಅಧಿಕಾರಿಗಳ  ಜೊತೆ  ಕೆರೆ  ಕೋಡಿ ವೀಕ್ಷಣೆ  ಮಾಡಲು ಬಂದಂತಹ ಲಿಂಮಬಾವಲಿಗೆ  ಮಹಿಳೆಯೊಬ್ಬರು ತನ್ನ ಮನೆಯ ದಾಖಲೆ  ಪತ್ರ ನೀಡಲು  ಬಂದಿದ್ದಾರೆ ಈ  ಸಂದರ್ಭ ಲಿಂಬಾವಲಿ ಮಹಿಳೆಯ ಮೇಲೆ  ಸಿಕ್ಕಾಪಟ್ಟೆ  ಎಗೆರಾಡಿದ್ದಾರೆ. ರಾಜಕಾಲುವೆ ಮಾಡಿಕೊಂಡಿದ್ದೀಯಾ ,ಇಲ್ಲಿ ಬಂದು ಮಾತನಾಡುತ್ತೀಯಾ ಎಂದು ಲಿಂಬಾವಳಿ ಗದರಿದ್ದಾರೆ. ನಾಚಿಕೆ ಆಗಲ್ವಾ ನಿನಗೆ  ಎಂದು ಮಹಿಳೆಗೆ ಆವಾಜ್ ಹಾಕಿದ್ದಾರೆ. ಒತ್ತುವರಿ ಮಾಡಿರುವ ನಿಂಗೆ ಮರ್ಯಾದೆ ಬೇರೆ ಕೊಡಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ. ತದನಂತರ  ಆಕೆಯನ್ನು ಪೊಲೀಸ್ ಠಾಣೆಗೆ  ಕರೆದುಕೊಂಡು ಹೋಗಿದ್ದಾರೆ. ಮಹಿಳೆಯನ್ನು ಸ್ಟೇಷನ್  ನಲ್ಲಿ  ಕೂರಿಸಿ  ಎಂಬುವುದಾಗಿ ರೇಗಾಡಿದ್ದಾರೆ. ಲಿಂಬಾವಳಿಯ  ಈ ವರ್ತನೆಗೆ ಎಲ್ಲರೂ  ಶಾಕ್  ಆಗಿದ್ದಾರೆ. ಈ  ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ ಎಚ್ಚೆತ್ತುಕೊಂಡ  ಶಾಸಕರು ನಾನು ಕ್ಷಮೆ ಕೇಳಲು ಸಿದ್ದನಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್ ನಲ್ಲಿ ಬರೆದಿರುವ ಪ್ರಕಾರವಾಗಿ ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ  ಆದರೆ ನಿಮ್ಮದೇ ಪಕ್ಷದ ಕಾರ್ಯಕರ್ತೆ ರೂತ್ ಸಗಾಯ್ ಮೇರಿ ಎಷ್ಟೋ ವರ್ಷದಿಂದ ರಾಜಕಾಲುವೆ ಒತ್ತುವರಿ ಮಾಡಿ ಸಮಸ್ಯೆ ಉಂ ಟು ಮಾಡಿದ್ದಾರಲ್ಲ ಅದನ್ನು ಖಾಲಿ ಮಾಡಲಿ ಅವರ ಮೊಂಡುತನ ನಿಲ್ಲಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

 

ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ವಿರುದ್ದ ಸಂತ್ರಸ್ತೆಯಿಂದ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರಿನಲ್ಲಿ ಮಳೆ ಹಾನಿ: ಸರಿಪಡಿಸಲು ತ್ವರಿತ ಕ್ರಮ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ

“ನೊಂದ ಬಾಲಕಿಯರಿಗೆ ನ್ಯಾಯ ಸಿಗಬೇಕಿದೆ” : ಕೋಡಿಹಳ್ಳಿ ಚಂದ್ರಶೇಖರ್

- Advertisement -

Latest Posts

Don't Miss