Political News: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಗರಂ ಆಗಿದ್ದು, ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಇದೆ. ಕೆಲವರು ಕೆಲಸ ಮಾಡದಿದ್ದರೂ, ನನಗೆ 77 ಸಾವಿರ ಮತ ಬಂದಿದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಕಾರ್ಯಕರ್ತ, ಅವರನ್ನು ಅವರೇ ಅಯೋಗ್ಯ ಎಂದು ಪ್ರೂವ್ ಮಾಡಿಕೊಂಡಿದ್ದಾರೆ. ನೀವು ಯಾರೋ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಹೇಳಿದ್ದೀರಲ್ಲಾ. ಹಾಗೇನಾದರೂ ಇದ್ದಲ್ಲಿ, ಅದರ ಸಾಕ್ಷ್ಯವಿದ್ದಲ್ಲಿ ಅದನ್ನು ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದ್ದಾರೆ.
ಅಲ್ಲದೇ, ನೀವು ಸಾಕ್ಷ್ಯ ತೋರಿಸಿದರೆ, ಜನ ನಿಮ್ಮನ್ನು ನಂಬುತ್ತಾರೆ. ಆದರೆ ನೀವು ಬೆಳಿಗ್ಗೆ ಒಂದು, ಸಂಜೆ ಒಂದು ಮಾತನ್ನಾಡಿ, ಹೇಳಿಕೆಗಳನ್ನು ಕೊಟ್ಟು ನಮ್ಮ ಪಾರ್ಟಿಗೆ ಅವಮಾನ ಮಾಡಬೇಡ. ನಿನ್ನಲ್ಲಿ ಇಷ್ಟೇ ವಿನಂತಿಸುತ್ತೇವೆ. ನಮ್ಮ ಪಕ್ಷದ ಗೌರವ ತೆಗೆಯಬೇಡ. ಪರ್ಸನಲ್ ಆಗಿ ಏನಾದರೂ ಮಾಡ್ಕೊಳ್ಬೇಕು ಅಂದ್ರೆ, ಮಾಡಿಕೋ, ತೊಂದರೆ ಇಲ್ಲ.
ಆದರೆ ಪಕ್ಷದ ಗೌರವ ಹಾಳು ಮಾಡಬೇಡ. ನೀನು ಒಂದು ರೂಪಾಯಿ ಖರ್ಚು ಮಾಡದೇ, ಇಷ್ಟು ಮಾತನಾಡುತ್ತಿಯಾ. ಪಕ್ಷದ ವಿರುದ್ಧವೇ ಮೂರು ಬಾರಿ ಪ್ರತಿಭಟನೆ ಮಾಡಿದ್ದಿಯಾ. ನಾವು ಪೋಸ್ಟರ್, ಬಂಟಿಂಗ್ಸ್‌ಗೆಲ್ಲಾ ಹಾಕಿ, ಪಕ್ಷ ಸಂಘಟನೆ ಮಾಡಿ, ಇಲ್ಲಿಯವರೆಗೂ ಬಂದಿದ್ದೇವೆ. ನಮ್ಮಂಥವರ ಮೇಲೆ ಹೀಗೆ ಆರೋಪ ಮಾಡ್ತಿಯಲ್‌ಲಾ. ನಾವು ಪಾರ್ಟಿಯಲ್ಲಿ ವಿರೋಧ ಚಟುವಟಿಕೆ ಮಾಡಿದ್ದೇವೆ ಎಂಬ ಪ್ರೂಫ್ ನಿನ್ನ ಬಳಿ ಇದ್ರೆ, ನೀನು ಗಂಡಸೇ ಆಗಿದ್ರೆ, ಅದನ್ನ ಪ್ರೂವ್ ಮಾಡಿ ತೋರಿಸು ಎಂದು ಸವಾಲ್ ಹಾಕಿದ್ದಾರೆ.