Tuesday, September 23, 2025

Latest Posts

ಈ RCB ಅಭಿಮಾನಿ ಮಾಡಿದ ಕೆಲಸ ನೋಡಿ ಬೆರಗಾಗ್ತೀರಾ!

- Advertisement -

ಕ್ರಿಕೆಟ್ ಅಂದ್ರೆ ಭಾರತದಲ್ಲಿ ಕೇವಲ ಆಟವಲ್ಲ, ಅದು ಜನರ ಭಾವನೆ, ಜೀವನದ ಒಂದು ಭಾಗ. ಅಭಿಮಾನಿಗಳು ತಮ್ಮ ತಂಡವನ್ನು ಪ್ರೀತಿಸುವ ರೀತಿ ಅಳೆಯಲು ಯಾವುದೇ ಪರಿಮಾಣವಿಲ್ಲ. ಆದರೆ ಒಬ್ಬ ಅಭಿಮಾನಿ ಮಾಡಿದದ್ದು, ನಿಜಕ್ಕೂ ಅಚ್ಚರಿ ಮೂಡಿಸುವಂತಹದ್ದು.

ಹೌದು, ನಾವು ಹೇಳುತ್ತಿರುವವರು ಮನೋಜ್ ನಾಯಕ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಕ್ಕಾ ಅಭಿಮಾನಿ. ಐಪಿಎಲ್ 2025ರಲ್ಲಿ ಆರ್‌ಸಿಬಿ 18 ವರ್ಷಗಳ ನಿರೀಕ್ಷೆಯನ್ನು ಮುಗಿಸಿ ಮೊದಲ ಬಾರಿಗೆ ಟ್ರೋಫಿ ಎತ್ತಿದ ಕ್ಷಣವನ್ನು ಶಾಶ್ವತವಾಗಿ ತಮ್ಮ ದೇಹದ ಮೇಲೆ ಅಚ್ಚು ಹಾಕಿಸಿಕೊಂಡಿದ್ದಾರೆ. ಟ್ರೋಫಿ ಗೆದ್ದ ಎಲ್ಲ ಆಟಗಾರರ ಹೆಸರುಗಳನ್ನು ತಮ್ಮ ಶರೀರದ ಮೇಲೆ ಟ್ಯಾಟೂ ಮಾಡಿಸಿಕೊಂಡಿದ್ದಾರೆ.

ಅಭಿಮಾನ ಎಂದರೆ ಇದು. ಟ್ರೋಫಿ ಗೆದ್ದ ಆಟಗಾರರ ಪ್ರತಿಯೊಬ್ಬರ ಹೆಸರನ್ನೂ ದೇಹದ ಮೇಲೆ ಬರೆಸಿಕೊಳ್ಳುವುದು ಸುಲಭವಲ್ಲ. ಆದರೆ ಮನೋಜ್ ನಾಯಕ್ ತಮ್ಮ ಪ್ರೀತಿಯನ್ನು ಹೀಗೆ ತೋರಿಸಿದ್ದಾರೆ. ಆರ್‌ಸಿಬಿ ತಂಡವಲ್ಲ, ಅದು ಒಂದು ಭಾವನೆ’ ಎಂದು ಹೇಳಿದ್ದಾರೆ. ಆರ್‌ಸಿಬಿ ಗೆದ್ದಿರುವುದು ಕೇವಲ ಪುರುಷರ ಐಪಿಎಲ್ ಮಾತ್ರವಲ್ಲ, ಮಹಿಳಾ ಪ್ರೀಮಿಯರ್ ಲೀಗ್ ಕೂಡ. ಎರಡೂ ಟ್ರೋಫಿಗಳನ್ನು ನೆನಪಿಸಿಕೊಂಡು, ಮನೋಜ್ ನಾಯಕ್ ಈ ಸಾಧನೆಯನ್ನು ಆರ್‌ ಸಿಬಿಗೆ ಸಮರ್ಪಿಸಿದ್ದಾರೆ. ಇದು ಕೇವಲ ಕ್ರಿಕೆಟ್ ಅಲ್ಲ, ಇದು ನಂಬಿಕೆ, ಇದು ಬೆಂಕಿ ಎಂದೂ ಅವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮನೋಜ್ ನಾಯಕ್ ವಿಶೇಷವಾಗಿ ವಿರಾಟ್ ಕೊಹ್ಲಿಗೆ ಪ್ರತ್ಯೇಕ ಪೋಸ್ಟ್ ಸಮರ್ಪಿಸಿದ್ದಾರೆ. 2008ರಿಂದ ಆರ್‌ಸಿಬಿ ಜೊತೆಗಿರುವ ವಿರಾಟ್, 18 ವರ್ಷಗಳ ಕಾಲ ಟ್ರೋಫಿಗಾಗಿ ಹೋರಾಡಿದ ವ್ಯಕ್ತಿ. This is our trophy in 18 years, keep celebrating… Love you RCB, love you Virat Kohli ಎಂದು ಅವರು ಬರೆದಿದ್ದಾರೆ.

18 ವರ್ಷಗಳ ನಂತರ ಆರ್‌ಸಿಬಿ ತನ್ನ ಕನಸಿನ ಟ್ರೋಫಿ ಗೆದ್ದಿತು. ಅಭಿಮಾನಿ ಮನೋಜ್ ನಾಯಕ್ ಅವರ ಟ್ಯಾಟೂ ಇದಕ್ಕೆ ಸಾಕ್ಷಿ. ಟ್ರೋಫಿ ಗೆಲುವು ತಾತ್ಕಾಲಿಕ, ಆದರೆ ಈ ನೆನಪು ಶಾಶ್ವತ. ಹೀಗಿದೆ ಅಭಿಮಾನಿಗಳ ಪ್ರೀತಿ. ಇದು ಕೇವಲ ಕ್ರಿಕೆಟ್ ಅಲ್ಲ, ಇದು ಮನಸ್ಸು, ಇದು ಭಾವನೆ. ಮತ್ತು ಮನೋಜ್ ನಾಯಕ್ ಅವರಂತೆ ಅಭಿಮಾನಿಗಳು ಇರುವಾಗ ಆರ್‌ಸಿಬಿ ಕೇವಲ ತಂಡವಲ್ಲ, ಅದು ಆತ್ಮ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss