Friday, November 21, 2025

Latest Posts

ಜನ ಮನ ಗೆಲ್ಲುತ್ತೀರೋ ರಘು ವ್ಯಕ್ತಿತ್ವ : ಕ್ಯಾಪ್ಟನ್ ಅಂದ್ರೆ ಹಿಂಗಿರ್ಬೇಕು !

- Advertisement -

ಮ್ಯೂಟಂಟ್ ರಘು, ಈ ವ್ಯಕ್ತಿಯನ್ನ ನೋಡಿದ ಕೂಡ್ಲೇ ಒಂದು ರೀತಿಯ ಭಯ ಹುಟ್ಟುತ್ತೆ, ಆದ್ರೆ ಆ ವ್ಯಕ್ತಿ ಜೊತೆ ಬೆರೆತವರಿಗೆ ಮಾತ್ರ ಗೊತ್ತಾಗೋದು ದೇಹವನ್ನ ನೋಡಿ ವ್ಯಕ್ತಿತ್ವವನ್ನ ಅಳಿಯೋಕೆ ಹೋಗ್ಬಾರ್ದು ಅಂತ, ವ್ಯಕ್ತಿತ್ವದ ಆಟದಲ್ಲಿ ಕರುನಾಡ ಜನತೆಯ ಮನಸ್ಸನ್ನ ಗೆಲ್ಲುತ್ತಿದ್ದಾರೆ ಬಾಹುಬಲಿ ರಘು, ಈ ವ್ಯಕ್ತಿ ವೈಯಕ್ತಿಕವಾಗಿ ಕೋಪಿಷ್ಠರು, ಮುಂಗೋಪಿ ಹಾಗೆಯೇ ಕೋಪ ಬಂದಾಗ ಏನ್ ಮಾಡೋಕು ರೆಡಿ ಇರ್ತಾರೆ ಅಂತ ಮ್ಯೂಟಂಟ್ ರಘು ಅವ್ರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋಕು ಮೊದಲೇ ಸ್ವತಃ ರಘು ಪತ್ನಿಯೇ ಕಿಚ್ಚ ಸುದೀಪ್ ಅವ್ರಿಗೆ ಹೇಳ್ತಾರೆ…

ಅದೇ ರೀತಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಮೊದಲ ದಿನವೇ ರಘು ಮನೆ ಮಂದಿಯ ಕಣ್ಣಲ್ಲಿ ವಿಲನ್ ಆಗಿ ಕಾಣಿಸ್ತಾರೆ, ಕಾಲ ಕಳೆದಂತೆ ರಘು ವ್ಯಕ್ತಿತ್ವ ಪ್ರತಿಯೊಬ್ಬ ಸ್ಪರ್ದಿಗೂ ಇಷ್ಟವಾಗೋಕೆ ಶುರುವಾಯ್ತು,ಬಿಗ್ ಬಾಸ್ ಮನೆಗೆ ಬರೋ ಅದೆಷ್ಟೋ ಸ್ಪರ್ದಿಗಳು ಕೋಪ ಜಾಸ್ತಿ ಇದೆ ಅದನ್ನ ಕಡಿಮೆ ಮಾಡ್ಕೋಬೇಕು ಅಂತ ಬಿಗ್ ಬಾಸ್ ಮನೆಗೆ ಬಂದೆ ಅಂತ ಹಳೆಯ ಸೀಸನ್ ಗಳಲ್ಲಿ ಹೇಳಿರೋದನ್ನ ನಾವೆಲ್ರು ನೋಡಿದ್ದೀವಿ, ಆದ್ರೆ ಅದ್ಯಾರ್ಯಾರು ಅದೆಷ್ಟು ಬದಲಾಗಿ ಮನೆಯಿಂದ ಹೊರಬಂದ್ರೋ ಗೊತ್ತಿಲ್ಲ, ರಘು ಅವರು ಮಾತ್ರ ಡಿಫರೆಂಟ್ ವ್ಯಕ್ತಿತ್ವವಾಗಿ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದು, ಜನತೆಯ ಮೆಚ್ಚುಗೆ ಪಡ್ಕೋತಾ ಇದಾರೆ …

ಅದ್ರಲ್ಲೂ ರಘು ಕಾಪ್ಟನ್ಸಿ ಅಂದ್ರೆ ಕ್ಲೀನ್ ಕಾಪ್ಟನ್ಸಿ ಅನ್ನೋ ಹಾಗೆ ಆಗಿದೆ, ಒಬ್ಬ ಕ್ಯಾಪ್ಟನ್ ಅಥವಾ ನಾಯಕನಿಗೆ ಇರಬೇಕಾದ ಎಲ್ಲ ಲಕ್ಷಣಗಳೂ ರಘು ಅವರಿಗೆ ಇವೆ, ಈ ಸೀಸನ್ನ ಮೊಟ್ಟ ಮೊದಲ ಕ್ಯಾಪ್ಟನ್ ಆದಾಗ್ಲೂ ರಘು ಅವರಿಗೆ ಪ್ರಿನ್ಸಿಪಾಲ್ ಅನ್ನೋ ಮತ್ತೊಂದು ಜವಾಬ್ದಾರಿಯನ್ನ ಬಿಗ್ ಬಾಸ್ ಕೊಡ್ತಾರೆ, ಅದನ್ನೂ ಕೂಡ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯನ್ನ ರಘು ಪಡೆದುಕೊಂಡು ಅಲ್ಲಿಂದಲೇ ಕರುನಾಡ ಮನಸ್ಸನ್ನೂ ಗೆಲ್ತಾರೆ ಕೂಲ್ ಕ್ಯಾಪ್ಟನ್ ರಘು, ಸ್ಪರ್ದಿಗಳು ರಘು ಅವರನ್ನ ಅದೆಷ್ಟೇ ಟ್ರಿಗರ್ ಮಾಡೋ ಪ್ರಯತ್ನವನ್ನ ಮಾಡಿದ್ರೂ ರಘು ಮಾತ್ರ ಎಲ್ಲೂ ತಮ್ಮ ಹಿಡಿತವನ್ನ ಕಳೆದುಕೊಂಡಿಲ್ಲ, ಒಬ್ಬ ಉತ್ತಮ ನಾಯಕನ ಉಧಾಹರಣೆಯಾಗಿ ರಘು ಕರುನಾಡ ಜನತೆಯ ಮನೆ ಮಾನಗಳನ್ನ ಗೆಲ್ಲುತ್ತಿದ್ದಾರೆ…..

ಇನ್ನು ಗಿಲ್ಲಿ ರಘು ಬಾಂಡಿಂಗ್ ಗೆ ಸಪರೇಟ್ ಫ್ಯಾನ್ ಬೇಸ್ ಇದೆ, ಗಿಲ್ಲಿ ಅದೆಷ್ಟೇ ಹಠ ಹಿಡಿದು, ಮನೆ ಮಂದಿ ಅದೆಷ್ಟೇ ಕೋಪಗೊಂಡರೂ ರಘು ಮಾತ್ರ ತಮ್ಮ ಸ್ನೇಹಕ್ಕೂ ಧಕ್ಕೆಯಾಗದಂತೆ, ಮನೆಮಂದಿಯ ನೆಮ್ಮದಿಗೂ ಧಕ್ಕೆಯಾಗದಂತೆ ಅಚ್ಚುಕಟ್ಟಾಗಿ ತಮಗಿರುವ ಜವಾಬ್ದಾರಿಯನ್ನ ನಿಭಾಯಿಸುತ್ತಿದ್ದಾರೆ, ಈ ವಾರವೂ ಕಿಚ್ಚನ ಚಪ್ಪಾಳೆ ರಘು ಪಾಲಾಗೋ ಲಕ್ಷಣಗಳು ಹೆಚ್ಚಾಗಿವೆ, ಕ್ಯಾಪ್ಟನ್ ಅಂದ್ರೆ ಹಿಂಗಿರ್ಬೇಕು ಅನ್ನೋದಕ್ಕೆ ಬೆಸ್ಟ್ ಎಗ್ಸಾಂಪಲ್ ರಘು ಅಂದ್ರೆ ತಪ್ಪಾಗಲ್ಲ….

ವರದಿ : ಗಾಯತ್ರಿ ಗುಬ್ಬಿ 
- Advertisement -

Latest Posts

Don't Miss