Saturday, June 21, 2025

Latest Posts

ಪೂಂಚ್ ನಲ್ಲಿ ನಡೆದ ಉಗ್ರರದಾಳಿಗೆ ಸೇನಾ ಯೋಧರು ಹುತಾತ್ಮ..!

- Advertisement -

www.karnatakatv.net :ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಕಿರಿಯ ನಿಯೋಜಿತ ಅಧಿಕಾರಿ ಸೇರಿದಂತೆ 5 ಜನ ಸೇನಾ ಯೋಧರು ಹುತಾತ್ಮರಾಗಿದ್ದಾರೆ.

ಹೌದು.. ಉಗ್ರರರು ಮತ್ತು ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಿಂದ ಯೋಧರು ಹುತಾತ್ಮರಾಗಿದ್ದಾರೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ಹೇಳಿದ್ದಾರೆ.

ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ಪಡೆದ ಯೋಧರು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ಪ್ರಾರಂಭಿಸಿದರು. ಈ ವೇಳೆ ಎನ್ ಕೌಂಟರ್ ಏರ್ಪಟ್ಟಿತು ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ. ಯೋಧರು ಶೋಧ ಕಾರ್ಯ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ತೀವ್ರ ಗಾಯಗೊಂಡು ಕಿರಿಯ ನಿಯೋಜಿತ ಅಧಿಕಾರಿ ಸೇರಿದಂತೆ ಇತರ ಐವರು ಹುತಾತ್ಮರಾಗಿದ್ದಾರೆ.

- Advertisement -

Latest Posts

Don't Miss