ಕರ್ನಾಟಕ ಟಿವಿ : ಆರೋಗ್ಯ ಸೇತು ಆ್ಯಪ್ ಸೇಫ್ ಅಲ್ಲಅಂತ ರಾಹುಲ್ ಆರೋಪ ಮಾಡಿದ್ರು.. ಆದ್ರೆ, ಕೇಂದ್ರ ಸರ್ಕಾರ ಆರೋಗ್ಯಸೇತು ಆ್ಯಪ್ ಸೇಫಿದೆ. ರಾಹುಲ್ ಗಾಂಧಿ ಸುಳ್ಳು ಹೇಳೋದನ್ನ ನಿಲ್ಲಿಸಲಿ ಅಂತ ಹೇಳಿತ್ತು.. ಇದೀಗ ಫ್ರಾನ್ಸ್ ಹ್ಯಾಕರ್ ಆರೋಗ್ಯ ಸೇತು ಆ್ಯಪ್ ನಲ್ಲಿ ಸಮಸ್ಯೆ ಇದೆ ಅಂತ ಟ್ವೀಟ್ ಮಾಡಿದ್ರು.. ಪ್ರೈವಸಿಗೆ ದಕ್ಕೆಯಾಗುತ್ತೆ ಅಂತ ಸಹ ಹೇಳಿದ್ರು.. ಇದೀಗ ಆ್ಯಪ್ ಡೆವಲಪರ್ಸ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಇದರಲ್ಲಿ 500 ಮೀಟರ್, ಒಂದು ಕಿಲೋ ಮೀಟರ್, ಎರಡು ಕಿಲೋ ಮೀಟರ್, ಐದು ಕಿಲೋ ಮೀಟರ್ ಹಾಗೂ ಹತ್ತು ಕಿಲೋ ಮೀಟರ್ ಅಂತ ಮಾತ್ರ ಮೆನ್ಶನ್ ಆಗಿದೆ. ಇದೇ ವ್ಯಕ್ತಿ ಸೋಂಕಿತ ಎಂದು ಆಪ್ ಗುರುತಿಸುವುದಿಲ್ಲ ಎಂದು ಹೇಳಿದ್ದಾರೆ. ಮತ್ತೊಂದು ವಿಷಯ ಅಂದ್ರೆ ಕೋವಿಡ್ ಸೋಂಕಿತರಿರುವ ಏರಿಯಾ ಎಲ್ಲರಿಗೂ ಗೊತ್ತಿರುವ ವಿಷಯವೇ ಇದರಲ್ಲಿ ಪ್ರೈವಸಿ ಪ್ರಶ್ನೆ ಉದ್ಭವವಾಗದಿಲ್ಲಅಂತ ಹೇಳಿದ್ದಾರೆ.. ಆರೋಗ್ಯ ಸೇತು ಆ್ಯಪ್ ಅನ್ನು ಸರ್ಕಾರಿ ಸ್ವಾಮ್ಯದ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ ಅಡಿಯಲ್ಲಿ ಬರುವ ನ್ಯಾಷನಲ್ ಇನ್ಫರ್ಮೇಷನ್ ಸೆಂಟರ್ ನಿಂದ ಅಭಿವೃದ್ಧಿ ಪಡಿಸಲಾಗಿದೆ..