- Advertisement -
Dharwad News: ಧಾರವಾಡ: ದಾಖಲೆ ಇಲ್ಲದೇ, ಚಿನ್ನ ಮತ್ತು ಬೆಳ್ಳಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ವ್ಯಕ್ತಿಯೋರ್ವ ಮುಂಬೈನಿಂದ ಬೆಂಗಳೂರಿಗೆ ದಾಖಲೆ ಇಲ್ಲದೇ ಚಿನ್ನ ಬೆಳ್ಳಿ ಸಾಗಾಟ ಮಾಡುತ್ತಿದ್ದು, ವಿ.ಆರ್.ಎಲ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಆದರೆ ಖಚಿತ ಮಾಹಿತಿ ಮೇರೆಗೆ ಧಾರವಾಡ ಗ್ರಾಮೀಣ ಪೊಲೀಸರು ದಾಳಿ ನಡೆಸಿದ್ದು, 2 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ವಶತಕ್ಕೆ ಪಡೆದಿದ್ದಾರೆ.
ನರೇಂದ್ರ ಬೈಪಾಸ್ ಬಳಿ ಬಸ್ ತಡೆದು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಚಿನ್ನಾಭರಣ ಪತ್ತೆಯಾಗಿದ್ದು, ಸದ್ಯ ಪೊಲೀಸರು ಚಿನ್ನಾಭರಣದ ಮೌಲ್ಯ ಲೆಕ್ಕ ಹಾಾಕಿದ್ದಾರೆ. 2 ಕೋಟಿಗೂ ಹೆಚ್ಚು ಬೆಲೆ ಬಾಳುವ ಆಭರಣವಿದ್ದು, ಸ್ಥಳಕ್ಕೆ ಎಎಸ್‌ಪಿ ನಾರಾಯಣ ಬರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -