Wednesday, December 4, 2024

Latest Posts

ಕೊಲೆಗೆ ಸಂಚು ರೂಪಿಸಿದ್ದ ಆರು ಜನರ ಬಂಧನ: ಕೇಸ್ ಮಾಹಿತಿ ಬಿಚ್ಚಿಟ್ಟ ಪೊಲೀಸ್ ಆಯುಕ್ತರು..!

- Advertisement -

Hubli News: ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಕೊಲೆಗೆ ಸಂಚು ರೂಪಿಸಿ ಅಡ್ಡಾಡುತ್ತಿದ್ದ 06 ಜನ ಆರೋಪಿಗಳನ್ನು ಒಳಗೊಂಡು ಕೃತ್ಯಕ್ಕೆ ಬಳಸಿದ ವಾಹನಗಳು ಹಾಗೂ ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಹೇಳಿದರು.

ಹಳೇ ಹುಬ್ಬಳ್ಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಪ್ರಾಪ್ತ ಬಾಲಕ ಸೇರಿ ಹಳೇ ಹುಬ್ಬಳ್ಳಿಯ ನಿವಾಸಿಗಳಾದ ಮಂಜುನಾಥ ಪಾಂಚಾನ, ಪವನ ಗಬ್ಬೂರ, ವಿನಾಯಕ ದುಂಡಿ, ನಾಗರಾಜ್ ಮಿರಜಕರ್, ರಾಜಪ್ಪ ಹನುಮನಹಳ್ಳಿ ಬಂಧಿತ ಆರೋಪಿಗಳಾಗಿದ್ದು, ಇನ್ನೊರ್ವ ಆರೋಪಿ ಗಣೇಶ್ ಬಿಲಾನಾ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದರು‌.

ಹಳೇ ವೈಷಮ್ಯ ಹಿನ್ನಲೆಯಲ್ಲಿ ಹಳೇ ಹುಬ್ಬಳ್ಳಿ ಸಿಕ್ಕಲಗಾರ ಓಣಿಯ‌ ನಿವಾಸಿ ದೀಪಕ ಧಾರವಾಡ ಎಂಬಾತನನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ಈ ಕುರಿತಂತೆ ಜೂನ್ 19ರಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸ್ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಗರದ ತಿಮ್ಮಸಾಗರ ಓಣಿಯಲ್ಲಿ ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.

ಘಟನೆಯ ಕೃತ್ಯಕ್ಕೆ ಬಳಸಿದ ಎರಡು ಬೈಕ್, ಆಟೋರಿಕ್ಷಾ, ೨ ತಲ್ವಾರ್, ೨ ಚಾಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ತೀವ್ರಗೊಂಡಿದೆ.‌ ಹಳೇ ವೈಷಮ್ಯ ಹಾಗೂ ಹಣಕಾಸಿನ ವ್ಯವಹಾರದ ಹಿನ್ನಲೆಯಲ್ಲಿ ದೀಪಕ ಧಾರವಾಡ ಹಾಗೂ ಗಣೇಶ್ ಎಂಬಾತನ ನಡುವೆ ನಡೆದಿತ್ತು, ಹೀಗಾಗಿ ದೀಪಕ್ ನನ್ನು ಮುಗಿಸಲು ಏಳು ಮಂದಿಯ ತಂಡವನ್ನು ಗಣೇಶ್ ರೂಪಿಸಿ ಕೊಲೆ ಸಂಚಿಗೆ ರೂಪಿಸಿದ್ದನು ಎಂದರು.

ಜೂನ್ 19 ರಂದು ರಾತ್ರಿ ಸಿದ್ಧಾರೂಢರ ಮಠದ ಬಳಿಯಲ್ಲಿ ತಂಡವೊಂದು ಸಂಶಯಾಸ್ಪದವಾಗಿ ಓಡಾಡುತ್ತಿರುವ ಮಾಹಿತಿಗಳು ಲಭ್ಯವಾಗಿತ್ತು. ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ್ ನೇತೃತ್ವದ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ, ಮೂವರನ್ನು ಬಂಧಿಸಿತ್ತು, ಅವರನ್ನು ವಿಚಾರಣೆ ನಡೆಸಿದಾಗ ಕೊಲೆಗೆ ಸಂಚು ರೂಪಿಸಿರುವುದಾಗಿ ತಿಳಿಸಿದ್ದು, ತಂಡದಲ್ಲಿ ಏಳು ಜನರು ಇರುವುದಾಗಿ ಬಾಯ್ಬಿಟ್ಟಿದ್ದರು‌ ಆರೋಪಿ ಗಣೇಶ್ ತಲೆಮರೆಸಿಕೊಂಡಿದ್ದು, ಉಳಿದ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

11 ಲಕ್ಷ ಮೌಲ್ಯದ 202 ಸೈಲೆನ್ಸರ್ ನಾಶ ಮಾಡಿದ್ದೇವೆ‌, ನಿಯಮ ಉಲ್ಲಂಘಿಸಿದರೆ ಹುಷಾರ್: ಕಮೀಷನರ್ ಎಚ್ಚರಿಕೆ

ಚೆನ್ನಮ್ಮ ವೃತ್ತದ ಬಳಿಯಲ್ಲಿ 200ಕ್ಕೂ ಅಧಿಕ ಸೈಲೆನ್ಸರ್ ನಾಶ: ಕರ್ಕಶ ಶಬ್ದ ಮಾಡಿದರೇ ಹುಷಾರ್..!

ಡಾ.ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಸಂತ್ರಸ್ತನ ವಿರುದ್ಧ ಪ್ರಕರಣ ದಾಖಲು

- Advertisement -

Latest Posts

Don't Miss