Sunday, April 20, 2025

Latest Posts

ಹುಬ್ಬಳ್ಳಿ ನಗರದ ಚಾಲಾಕಿ ಕಳ್ಳಿಯ ಬಂಧನ

- Advertisement -

www.karnatakatv.net : ಹುಬ್ಬಳ್ಳಿ : ಮನೆಗೆಲಸದಾಕೆಯ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿ  ಕಳ್ಳಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ನಗರ  ಕಮೀಷನರೇಟ್ ನ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಾಯತ್ರಿ ಸಂದೀಪ ಗಾಯಕವಾಡ ಎಂಬ ಮಹಿಳೆಯನ್ನು ಬಂಧಿಸಿರೋ ಹುಬ್ಬಳ್ಳಿ ಉಪನಗರ ಪೊಲೀಸರು ಆಕೆಯಿಂದ ಹನ್ನೊಂದು ಲಕ್ಷದ ಮೂವತ್ತೊಂಭತ್ತು ಸಾವಿರ ರೂಪಾಯಿ ಮೌಲ್ಯದ ೨೫೦ ಗ್ರಾಂ ಚಿನ್ನಾಭರಣಗಳು, ಒಂದು ಮೊಬೈಲ್ ಫೋನ್ ಸೇರಿದಂತೆ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈಕೆ ಹುಬ್ಬಳ್ಳಿ ಹಳೇ ಬಸ್‌ ನಿಲ್ದಾಣದ ಬಳಿಯ ಹೋಟೆಲ್ ವೊಂದರ  ಮುಂದೆ ಜನವರಿ 04ರಂದು ಒಂದು ಮೊಬೈಲ್ ಫೋನನ್ನು ಕಳ್ಳತನ ಮಾಡಿದ್ಲು. ಈ ಕುರಿತು ದಾಖಲಾದ ಪ್ರಕರಣದ ತನಿಖೆಯ ಜಾಡು ಹಿಡಿದ ಪೊಲೀಸರು ಈಕೆ ಮಾಡಿದ ಹತ್ತಲವು ಕಳ್ಳತನವನ್ನು ಬಯಲಿಗೆಳೆದಿದ್ದಾರೆ.  ಇನ್ನು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಉಪನಗರ ಪೊಲೀಸ ಠಾಣೆಯ ಎಸ್ ಐ ರವಿಚಂದ್ರ ಡಿ.ಬಿ, ಪಿ ಎಸ್ ಐ  ಅಶೋಕ್ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss