ದೆಹಲಿ: ಭಾರತದ ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆ ಕುರಿತು ತೀಕ್ಷ್ಣವಾದ ಕಮೆಂಟ್ ಗಳು ಮತ್ತು ಪ್ರಶ್ನೆಗಳ ಜೊತೆಗೆ, ಸುಪ್ರೀಂ ಕೋರ್ಟ್ ಈಗ ನಿರ್ದಿಷ್ಟ ಫೈಲ್ ಗಳನ್ನು ಕೇಳಿದೆ. ನವೆಂಬರ್ 19 ರಂದು ಅರುಣ್ ಗೋಯೇಲ್ ಅವರನ್ನು ಚುನಾವಣಾ ಆಯೋಗಕ್ಕೆ ನೇಮಕ ಮಾಡುವ ಕುರಿತು ಗುರುವಾರವೂ ವಿಚಾರಣೆ ಮುಂದುವರಿಯಲಿದೆ. ಏಕೆಂದರೆ ಅವರಿಗೆ ಇತ್ತಿಚೆಗೆ ಸ್ವಯಂ ನಿವೃತ್ತಿ ನೀಡಲಾಗಿದ್ದು,ತಕ್ಷಣ ಚುನಾವಣಾ ಸಂಸ್ಥೆಗೆ ನೇಮಕ ಮಾಡಲಾಗಿದೆ.
ಕಾಡಾನೆಗಳನ್ನು ಸ್ಥಳಾಂತರ ಮಾಡುವುದಕ್ಕೆ ವಿಶೇಷ ಕಾರ್ಯಪಡೆ ಮಾಡಿದ್ದೇವೆ : ಸಿಎಂ ಬೊಮ್ಮಾಯಿ
ಈ ಬಗ್ಗೆ ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನೇಮಕಾತಿಯಲ್ಲಿ ಯಾವುದೇ ದೋಷಗಳಿವೆಯೇ ಎಂದು ತಿಳಿಯಲು ಬಯಸಿದೆ. ಅರುಣ್ ಗೋಯೆಲ್ ಅವರ ನೇಮಕವನ್ನು ಕಾರ್ಯಕರ್ತ, ವಕೀಲ ಪ್ರಶಾಂತ್ ಭೂಷನ್ ಅವರು ಪ್ರಕ್ರಿಯೆಯ ಮೇಲಿನ ಅರ್ಜಿಗಳ ಬ್ಯಾಚ್ ವಿಚಾರಣೆಯ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಇತ್ತೀಚೆಗಷ್ಟೇ ನಿವೃತ್ತರಾದ ಐಎಎಸ್ ಅಧಿಕಾರಿ ಗೋಯೆಲ್ ಅವರನ್ನು ಮೂರು ಸದಸ್ಯರ ಚುನಾವಣಾ ಆಯೋಗದ ಭಾಗವಾಗಿ ಮಾಡಲಾಗಿದೆ.
ಪಾಸ್ ಪೋರ್ಟ್ ನಲ್ಲಿ ಒಂದೇ ಹೆಸರಿದ್ದರೆ ಯುಎಇ ಪ್ರಯಾಣಕ್ಕೆ ಅನುಮತಿ ಇಲ್ಲ
ಮಂಗಳೂರು ಬ್ಲಾಸ್ಟ್ ನಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು