www.karnatakatv.net: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನ್ನು ಮುಂಬೈನ ಹಡಗಿನೊಂದರಲ್ಲಿ ಡ್ರಗ್ ಪಾರ್ಟಿ ಸಂಬoಧ ಬಂಧಿಸಲಾಗಿದ್ದು, ಅದರ ಹಿನ್ನೆಲೇ ಜಾಮೀನು ಅರ್ಜಿಯನ್ನು ಕೊಡಲಾಗಿದ್ದು, ಆ ಅರ್ಜಿಯನ್ನು ಎನ್ ಡಿಪಿಎಸ್ ನ್ಯಾಯಾಲಯ ವಜಾಗೊಳಿಸಿದೆ.
ಆರ್ಯನ್ ಗೆ ಇನ್ನೂ ಜೈಲೇ ಗತಿಯಾಗಿದೆ. ಡ್ರಗ್ ಕೇಸ್ ನಲ್ಲಿ ಬಂಧಿಸಲಾಗಿದ್ದ ಆರ್ಯನ್ ಗೆ ಅರ್ಜಿಯನ್ನು ವಜಾಗೊಳಿಸಲಾಗಿದೆ. ಅ.3 ರಂದು ಎನ್ಸಿಬಿ ಇಂದ ಬಂಧಿತನಾಗಿದ್ದ ಆರ್ಯನ್ ಸದ್ಯ ಮುಂಬೈನ ಅರ್ಥೂರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆರ್ಯನ್ ಗೆ ಜಾಮೀನು ನೀಡುವಂತೆ ಮುಂಬೈನ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಪ್ರಕರಣಕ್ಕೆ ಸಂಬAಧಿಸಿದAತೆ ಆರ್ಯನ್ ಸೇರಿದಂತೆ ಇನ್ನು ಮೂವರಿಗೆ ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ.
ಈ ಪ್ರಕರಣದ ಆರೋಪಿ ಆರ್ಯನ್ ಖಾನ್ ಮತ್ತು ಇತರರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 8 (ಸಿ), 20 (ಬಿ), 27, 28, 29 ಮತ್ತು 35ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.