www.karnatakatv.net: ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮತ್ತೆ ಮುಂದೂಡಲಾದ ಬಾಂಬೆ ಹೈಕೋರ್ಟ್.
ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಆರ್ಯನ್ ಪರ ಭಾರತದ ಮಾಜಿ ಅಟಾರ್ನಿ ಜನರಲ್, ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು. ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಬುಧವಾರಕ್ಕೆ ವಿಚಾರಣೆ ಮುಂದೂಡಿತ್ತು. ಇಂದು ನ್ಯಾಯಾಲಯವು ಮತ್ತೆ ನಾಳೆ ವಿಚಾರಣೆ ಮುಂದೂಡಿದೆ. ‘ಸಿಆರ್‌ಪಿಸಿಯ ಸೆಕ್ಷನ್ 50ಕ್ಕಿಂತಲೂ ಸಂವಿಧಾನದ ಅನುಚ್ಛೇದ 22 ಮುಖ್ಯವಾಗುತ್ತದೆ. ಯಾವ ಕಾರಣಕ್ಕಾಗಿ ಬಂಧಿಸಲಾಗುತ್ತಿದೆ ಎಂಬುದನ್ನು ತಿಳಿಸದೆಯೇ ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆಯುವಂತಿಲ್ಲ. ಹಾಗೇ ವ್ಯಕ್ತಿಯು ತನ್ನ ಆಯ್ಕೆಯ ವಕೀಲರನ್ನು ಸಂಪರ್ಕಿಸುವ ಹಕ್ಕಿರುತ್ತದೆ’ ಎಂದು ರೋಹಟಗಿ ಪ್ರಸ್ತಾಪಿಸಿದರು.
ನಾಳೆ ಮಧ್ಯಾಹ್ನ 3ಕ್ಕೆ ವಿಚಾರಣೆ ನಿಗದಿಯಾಗಿದ್ದು, ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಕುಮಾರ್ ಸಿಂಗ್ ಅವರು ಎನ್‌ಸಿಬಿ ಪರ ವಾದ ಮಂಡಿಸಲಿದ್ದಾರೆ. ಆರೋಪಿ ಅರ್ಬಾಜ್ ಮರ್ಚಂಟ್ ಪರ ಅಮಿತ್ ದೇಸಾಯಿ ವಾದ ಮಂಡಿಸಿದರು. ‘ಈ ಪ್ರಕರಣಕ್ಕೂ ವಾಟ್ಸ್ಆಯಪ್ ಚಾಟ್‌ಗಳಿಗೂ ಒಂದಕ್ಕೊAದು ಸಂಬAಧವಿಲ್ಲ. ಹೆಣೆಯಲಾಗಿರುವ ಸಂಚಿಗೆ ಅದು ಪೂರಕವಾಗಿಲ್ಲ. ನಾವೀಗ ಮಾಧ್ಯಮಗಳ ವಿಚಾರಣೆಯನ್ನು ಎದುರಿಸುತ್ತಿದ್ದೇವೆ’ ಎಂದು ಕೋರ್ಟ್ಗೆ ತಿಳಿಸಿದರು. ಪ್ರಕರಣದಲ್ಲಿ ಸಾಕ್ಷಿಧಾರನಾಗಿರುವ ಪ್ರಭಾಕರ್ ಸೈಲ್, ಎನ್‌ಸಿಬಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಆರ್ಯನ್ ಖಾನ್ ಬಿಡುಗಡೆ 25 ಕೋಟಿ ಡೀಲ್ ನಡೆದಿತ್ತು ಎಂದಿದ್ದರು.