Friday, October 18, 2024

Latest Posts

ಮಾತಿನಂತೆ ನಡೆದ ಕೇಂದ್ರ ಸಚಿವ ಜೋಶಿ, ಆಸ್ಟ್ರೇಲಿಯಾದಿಂದ ಅಜ್ಜ ಅಜ್ಜಿಯ ಮಡಿಲು ಸೇರಿದ ದೇಸಾಯಿ ಮೊಮ್ಮಕ್ಕಳು

- Advertisement -

Hubli News: ಹುಬ್ಬಳ್ಳಿ: ಮಾತಿನಂತೆ ನಡೆದುಕೊಂಡು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ದೇಸಾಯಿ ಕುಟುಂಬ ಸ್ವತಃ ಜೋಶಿ ಅವರ ಮನೆಗೆ ಬಂದು ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಹ್ಲಾದ್ ಜೋಶಿ ಅವರ ಶ್ರಮದಿಂದ ಧಾರವಾಡದ ಪ್ರೊ.ಎಸ್.ಎಸ್.ದೇಸಾಯಿ ಅವರ ಮೊಮ್ಮಕ್ಕಳು ತಮ್ಮ ಮಡಿಲು ಸೇರಿದ್ದಾರೆ.
ಹೌದು,, ಧಾರವಾಡದ ಪ್ರೊ.ಎಸ್.ಎಸ್.ದೇಸಾಯಿ ಅವರ ಅವರ ಪುತ್ರಿ ಪ್ರಿಯದರ್ಶಿನಿ ಅವರು ಆಸ್ಟ್ರೇಲಿಯಾದಲ್ಲಿ ನಡೆದ, ಕೆಲ ಕಾನೂನು ತೊಡಕುಗಳಿಂದ ಮನನೊಂದು ಆಸ್ಟ್ರೇಲಿಯಾದಿಂದ ಮರಳಿ ಭಾರತಕ್ಕೆ ಬಂದು ಮನೆಗೂ ಬಾರದೇ ಸವದತ್ತಿ ಮಲಪ್ರಭಾ ಡ್ಯಾಮ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಪ್ರಿಯದರ್ಶಿನಿ ಅವರು ತಮ್ಮ ಪತಿಯೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಅಲ್ಲಿ ಪ್ರಿಯದರ್ಶಿನಿ ಅವರು ಆಸ್ಟ್ರೇಲಿಯಾದ ಕಾನೂನು ವಿರುದ್ಧ ಹೋರಾಟ ನಡೆಸಿದ್ದರು ಎಂಬ ಕಾರಣಕ್ಕೆ ಅವರ ಇಬ್ಬರು ಮಕ್ಕಳನ್ನು ಆಸ್ಟ್ರೇಲಿಯಾ ಸರ್ಕಾರ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿತ್ತು. ಆ ಮಕ್ಕಳನ್ನು ತಂದೆಯ ಬಳಿಯೂ ನೀಡದೇ ಭಾರತಕ್ಕೂ ಕಳುಹಿಸದೇ ಆಸ್ಟ್ರೇಲಿಯಾ ತನ್ನ ಸುಪರ್ದಿಯಲ್ಲೇ ಇಟ್ಟುಕೊಂಡಿತ್ತು. ಇದನ್ನು ತಾಳಲಾರದೆ ಪ್ರಿಯದರ್ಶಿನಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿಷಯ ತಿಳಿದು ಅಂದು ಅವರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಪ್ರೊ.ದೇಸಾಯಿ ಅವರಿಗೆ ಅವರ ಮೊಮ್ಮಕ್ಕಳನ್ನು ಆಸ್ಟ್ರೇಲಿಯಾ ಸರ್ಕಾರದಿಂದ ಬಿಡುಗಡೆಗೊಳಿಸಿ ತಂದೆಯ ಸುಪರ್ದಿಗೆ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಇಂದು ಆ ಮೊಮ್ಮಕ್ಕಳು ಈಗ ದೇಸಾಯಿ ಅವರ ಮನೆಗೆ ಸೇರಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಏನು ಹೇಳಿದ್ದಾರೆ ಕೇಳಿ.

ಇನ್ನು ದೇಸಾಯಿ ಅವರ ಮೊಮ್ಮಕ್ಕಳನ್ನು ಮರಳಿ ಭಾರತಕ್ಕೆ ಕರೆಯಿಸುವೆ ಎಂದು ಪಣ ತೊಟ್ಟ ಜೋಶಿ ಅವರು, ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ ಅವರ ಗಮನಕ್ಕೆ ಈ ವಿಷಯ ತಂದು ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಅದರ ಫಲವಾಗಿ ಆಸ್ಟ್ರೇಲಿಯಾ ಸರ್ಕಾರ ಪ್ರೊ.ಎಸ್.ಎಸ್.ದೇಸಾಯಿ ಅವರ ಮೊಮ್ಮಕ್ಕಳನ್ನು ಅವರ ಅಳಿಯನಿಗೆ ಹಸ್ತಾಂತರಿಸುವಂತೆ ಮಾಡಿದ್ದರು. ಇಂದು ಅವರು ಭಾರತಕ್ಕೆ ಆಗಮಿಸಿ ಅಜ್ಜ, ಅಜ್ಜಿಯ ಮಡಿಲು ಸೇರಿದ್ದಾರೆ. ಈ ಖುಷಿಗೆ ಜೋಶಿ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಕೊಟ್ಟ ಮಾತಿನಂತೆ ಪ್ರೊ.ಎಸ್.ಎಸ್.ದೇಸಾಯಿ ಅವರ ಮೊಮ್ಮಕ್ಕಳನ್ನು ಭಾರತಕ್ಕೆ ಕರೆತರಲು ಸತತ ಪ್ರಯತ್ನ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ದೇಸಾಯಿ ಕುಟುಂಬ ಆಭಾರಿಯಾಗಿ ಅಭಿನಂದನೆ ಸಲ್ಲಿಸಿದೆ. ಮೊಮ್ಮಕ್ಕಳ ಆಗಮನದಿಂದ ದೇಸಾಯಿ ಕುಟುಂಬ ಸಂತಸ ಮುಗಿಲು ಮುಟ್ಟಿದೆ.

- Advertisement -

Latest Posts

Don't Miss