Saturday, June 21, 2025

Latest Posts

ರಾಕಿಂಗ್ ಸ್ಟಾರ್ ಯಶ್ ಜೊತೆ ಚುಟು ಚುಟು ಬೆಡಗಿ..!

- Advertisement -

ಕೆಜಿಎಫ್ ಬಿಗ್ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಎಂಬ ಖ್ಯಾತಿ ಪಡೆದಿದ್ದಾರೆ. ನ್ಯಾಷನಲ್ ಸ್ಟಾರ್ ಪಟ್ಟ ಪಡೆದಿರೋ ರಾಕಿಭಾಯ್ ಜೊತೆ ಸಿನಿಮಾ ಮಾಡೋದಿಕ್ಕೆ ಸ್ಯಾಂಡಲ್ ವುಡ್ ನ ಸಾಕಷ್ಟು ಸ್ಟಾರ್ ನಟಿಯರು ಎಕ್ಸೈಟ್ ಆಗಿದ್ದಾರೆ. ಈ ಪೈಕಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕೂಡ ಒಬ್ರು.


ಸ್ಯಾಂಡಲ್ ವುಡ್ನ ಬಹುಬೆಡಗಿ ನಟಿಯರ ಪೈಕಿ ಆಶಿಕಾ ಕೂಡ ಒಬ್ರು. ಸದ್ಯ ಪವನ ಒಡೆಯರ್ ನಿರ್ದೇಶನದ ರೇಮೋ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಯಶ್ ಅಭಿಮಾನಿಯೊಬ್ಬರು ಗೂಗ್ಲಿ-2 ಸಿನಿಮಾದಲ್ಲಿ ಯಶ್ ಜೊತೆ ಆಶಿಕಾ ರಂಗನಾಥ್ ಜೊತೆ ಸಿನಿಮಾ ಮಾಡೋ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಆಶಿಕಾ ಕೂಡ ಗ್ರೀನದ ಸಿಗ್ನಲ್ ಕೊಟ್ಟಿದ್ದಾರೆ. ನಾನು ಗೂಗ್ಲಿ ಸಿನಿಮಾದ ದೊಡ್ಡ ಫ್ಯಾನ್ ನನ್ನನ್ನು ಯಶ್ ಸರ್ ಜೊತೆ ನೋಡೋ ಆಸೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು. ಯಶ್ ಸರ್ ಜೊತೆ ಕೆಲಸ ಮಾಡೋದೆ ದೊಡ್ಡ ಕೆಲಸ ಅಂತಾ ಹೇಳಿಕೊಂಡಿದ್ದಾರೆ.


ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ ಗೂಗ್ಲಿ ಚಿತ್ರಕ್ಕೆ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿದ್ರು. ಈಗ ಪವನ್ ಒಡೆಯರ್ ಚಿತ್ರ ರೇಮೋ ಚಿತ್ರದಲ್ಲಿ ಆಶಿಕಾ ಅಭಿನಯಿಸ್ತಿದ್ದಾರೆ. ಒಂದು ವೇಳೆ ಪವನ್ ಒಡೆಯರದ ಗೂಗ್ಲಿ-2 ಸಿನಿಮಾ ಕೈಗೆತ್ತಿಕೊಂಡ್ರೆ ಆಶಿಕಾಗೆ ಅವಕಾಶ ಕೊಡಬಹುದು.

- Advertisement -

Latest Posts

Don't Miss