Monday, October 6, 2025

Latest Posts

ಅಪ್ಪು ಡೈಹಾರ್ಡ್‌ ಫ್ಯಾನ್‌ ಮದುವೆಗೆ ಅಶ್ವಿನಿ ಗೈರು!

- Advertisement -

ಕನ್ನಡದ ಜನಪ್ರಿಯ ಆ್ಯಂಕರ್ ಅನುಶ್ರೀ, ಆಗಸ್ಟ್‌ 28ರಂದು ತಮ್ಮ ಗೆಳೆಯ ರೋಷನ್ ಜೊತೆ ಸಪ್ತಪದಿ ತುಳಿದರು. ಮದುವೆಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಹಾಜರಿದ್ದರು. ಆದರೆ ಅಪ್ಪು ಫ್ಯಾನ್‌ ಆದ ಅನುಶ್ರೀ ಮದುವೆಯಲ್ಲಿ ಅಶ್ವಿನಿ ಪುನೀತ್ ಕಾಣಿಸದಿರುವುದು ಚರ್ಚೆಗೆ ಕಾರಣವಾಗಿದೆ.

ಅಪ್ಪು ಅವರ ಡೈ ಹಾರ್ಡ್‌ ಫ್ಯಾನ್‌ ಅನುಶ್ರೀ, ತಮ್ಮ ಮದುವೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಫೋಟೋವನ್ನ ಇರಿಸಿಕೊಂಡು ಗೌರವ ಸಲ್ಲಿಸಿದರು. ಮದುವೆಯ ನಂತರ, ಪತಿ ರೋಷನ್ ಜೊತೆ ಅಪ್ಪು ಫೋಟೋ ಮುಂದೆ ನಿಂತು ಚಿತ್ರ ತೆಗೆಸಿಕೊಂಡಿದ್ದು, ಅದು ಅಭಿಮಾನಿಗಳ ಹೃದಯ ಗೆದ್ದಿತು.

ಅನುಶ್ರೀ ಮದುವೆಯ ಮತ್ತೊಂದು ವಿಶೇಷ ಅಂದ್ರೆ AI ಬಳಸಿ ಎಡಿಟ್‌ ಮಾಡಲಾದ ಒಂದು ಫೋಟೋ. ಅದರಲ್ಲಿ ಅನುಶ್ರೀ-ರೋಷನ್ ಜೊತೆಗೆ ಪುನೀತ್ ರಾಜ್‌ಕುಮಾರ್ ಕೂಡ ನಿಂತಂತೆ ಕಾಣಿಸುತ್ತಿದ್ದಾರೆ. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಮದುವೆಯಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಹಾಜರಾಗಿ, ಅನುಶ್ರೀ-ರೋಷನ್‌ ಜೊತೆ ವಿಶೇಷ ಕ್ಷಣ ಹಂಚಿಕೊಂಡರು. ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಅನುಶ್ರೀಗೆ ಶಿವಣ್ಣ ಆಶೀರ್ವಾದ ನೀಡಿದ್ದರು. ಇನ್ನು ಅಪ್ಪು ಫ್ಯಾನ್‌ ಅನುಶ್ರೀ ಮದುವೆಯಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಕಾಣಿಸದಿರುವುದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿಸಿದೆ. ಅವರು ಬರಲಿಲ್ಲವೇ? ಯಾಕೆ ಬರಲಿಲ್ಲ? ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿವೆ.

ಅನುಶ್ರೀ ಪತಿ ರೋಷನ್‌ಗೆ, ಯುವ ಮಾಜಿ ಪತ್ನಿ ಶ್ರೀದೇವಿ ಭೈರಪ್ಪ ಚೈಲ್ಡ್‌ಹುಡ್‌ ಫ್ರೆಂಡ್‌. ಅವರ ಮೂಲಕವೇ ರೋಷನ್ ಮತ್ತು ಅನುಶ್ರೀ ಒಟ್ಟಾಗಿದ್ದು, ಮದುವೆಗೆ ಶ್ರೀದೇವಿ ಭೈರಪ್ಪ ಕುಟುಂಬ ಸಮೇತರಾಗಿ ಹಾಜರಾದರು. ಈ ಫೋಟೋಗಳು ಕೂಡ ಈಗ ವೈರಲ್ ಆಗಿವೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss