ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜಿಮ್ ನಲ್ಲಿ ವರ್ಕೌಟ್ ಮಾಡಿರೋದನ್ನ ನಾವೆಲ್ಲರೂ ನೋಡಿದ್ದೀವಿ.. ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ಅದೇ ಹಾದಿಯಲ್ಲಿ ಮುಂದುವರಿದಿದ್ದಾರೆ..

ಪವರ್ ಸ್ಟಾರ್ ಹಾಗೆ ಅಶ್ವಿನಿ ಕೂಡ ಜಿಮ್ನಲ್ಲಿ ಬೆವರಿಳಿಸುತ್ತಿದ್ದಾರೆ. ಅಶ್ವಿನಿ ವರ್ಕ್ಔಟ್ ಮಾಡುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಫಿಟ್ ಆಗಲು ವರ್ಕೌಟ್ ಪ್ರಾರಂಭಿಸಿದ್ದಾರೆ. ಪಿಆರ್ ಕೆ ಸಂಸ್ಥೆಯನ್ನು ನಿಭಾಯಿಸುತ್ತಿರುವ ಅಶ್ವಿನಿ ಕೆಲಸದ ಜತೆಗೆ ಜಿಮ್ ಕೂಡ ಮಾಡುತ್ತಿರುವುದು ವಿಶೇಷ . ಅಪ್ಪು ಅಭಿನಯದ ‘ಯುವರತ್ನ’ ಸಿನಿಮಾದ ‘ಫೀಲ್ ದಿ ಪವರ್’ ಸಾಂಗ್ ಬ್ಯಾಕ್ಗ್ರೌಂಡ್ನಲ್ಲಿ ಪ್ಲೇ ಆಗುತ್ತಿದೆ. ಇನ್ನು ಹಾಡನ್ನು ಕೇಳಿದ ಮೇಲಂತೂ ಪವರ್ಸ್ಟಾರ್ ಅಭಿಮಾನಿಗಳು ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ.





