Film News : ಅಶ್ವಿನಿ ಪುನೀತ್ ರಾಜಕುಮಾರ್ ಇಂದು ಅಂದರೆ ಜುಲೈ 27ರಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿ ಆಶೀರ್ವಾದ ಪಡೆದರು.
‘ಆಚಾರ್ & ಕೋ’ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆ ಅವರು ದೇವಿಯ ಪೂಜೆ ಸಲ್ಲಿಸಿ, ಸಿನಿಮಾ ಗೆಲ್ಲುವಂತೆ ಪ್ರಾರ್ಥಿಸಿದರು. ಅಶ್ವಿನಿ ಪುನೀತ್ ರಾಜ್ ಕುಮಾರ್ ಜೊತೆಗೆ ‘ಆಚಾರ್ & ಕೋ’ ಚಿತ್ರತಂಡದವರರು ಕೂಡ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು.
ಆಚಾರ್ & ಕೋ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ ಚಿತ್ರವಾಗಿದ್ದು ಈ ಚಿತ್ರ ನಾಳೆ ಬಿಡುಗಡೆ ಆಗಲಿದೆ.ಈ ಹಿನ್ನಲೆ ಚಾಮುಂಡಿ ದೇವಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಟ ವಿನಯ್ ರಾಜಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಪುತ್ರಿ ಜೊತೆಗಿದ್ದರು.
Darling Krishna:ಸಿನಿಮಾ ಪ್ರಚಾರಕ್ಕೆ ಮೆಟ್ರೋ ಪ್ರಯಾಣ ಮಾಡಿದ ಡಾರ್ಲಿಂಗ್ ಕೃಷ್ಣ
Dharshan : ದರ್ಶನ್, ಕಾಲಿಗೆ ಏಟಾಗಿದ್ದರೂ ಯುಕೆ ಫ್ಲೈಟ್ ಏರಿದ್ದು ಯಾಕೆ ..?!