State News:
ಕರ್ನಾಟಕ ರತ್ನ.. ಕನ್ನಡದ ಕಂದ.. ಡಾ. ಪುನೀತ್ ರಾಜ್‍ಕುಮಾರ್ ಅಗಲಿ 11 ತಿಂಗಳೇ ಕಳೆದಿದೆ. ಆದರೂ ಅಪ್ಪುವಿನ ಮೇಲಿನ ಅಭಿಮಾನ, ಪ್ರೀತಿ ಮಾತ್ರ ಕಿಂಚಿತ್ತು ಕಡಿಮೆ ಆಗಿಲ್ಲ. ಅದ್ದೂರಿ ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಈ ಬಾರಿಯ ೬ ದಿನಗಳ ಕಾರ್ಯಕ್ರಮ ನಡೆಯಲಿದೆ. ‘ಅಪ್ಪು ನಮನ’ ಹೆಸರಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಗಿದೆ. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ರಾಘಣ್ಣ, ದೀಪ ಬೆಳಗುವ ಮೂಲಕ ಚಾಲನೆ ಕೊಟ್ಟರು. ಯುವ ದಸರಾಗೆ ಚಾಲನೆ ಸಿಕ್ಕೊಡನೆ ಕೂಗಿ ಬಂದಿದ್ದು ಒಂದೇ ಕೂಗು ಅದು ಅಪ್ಪು.. ಅಪ್ಪು..
ಅಪ್ಪು ಚಿತ್ರದ ಹಾಡಿಗೆ ನೃತ್ಯ ನೆರೆದಿದ್ದವರನ್ನು ಹುಚ್ಚೆದ್ದು ಕುಣಿಯುವಂತೆ ಮಾಡ್ತು. ಕಾರ್ಯಕ್ರಮದಲ್ಲಿ ಅಪ್ಪುವಿನ ಕನಸು ಗಂಧದಗುಡಿ ಟೀಸರ್ ಪ್ರಸಾರ ವೇಳೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭಾವುಕರಾಗಿ ಕಣ್ಣೀರಿಟ್ಟರು. ಈ ಸನ್ನಿವೇಶ ನೆರೆದಿದ್ದವರನ್ನು ಒಂದು ಕ್ಷಣ ಸ್ಥಬ್ದವಾಗಿಸಿತು.
“ಪಾರಂಪರಿಕ ಸೈಕಲ್ ಸವಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
ಮುಸ್ಲಿಂ ನೇಕಾರನಿಂದ ಶಾರದಾ ದೇವಿಗೆ 8 ಲಕ್ಷ ರೂ ಮೌಲ್ಯದ ಚಿನ್ನದ ಸೀರೆ ದೇಣಿಗೆ..?!