Wednesday, November 26, 2025

Latest Posts

ಅಶ್ವಿನಿ ಇನ್ನರ್ ಪ್ಲಾನ್ ಉಲ್ಟಾ : ಪ್ಲಾನ್ ಫೇಲ್ – ಅಶ್ವಿನಿ ಫೀಲ್ !

- Advertisement -

“ನನಗೆ ಸಖತ್ ಹಿಂಸೆ ಆಗುತ್ತಿದೆ. ಈ ಗೇಮ್ ನನಗಲ್ಲ ಅನಿಸುತ್ತಿದೆ, ಈ ಮಾತನ್ನ ಯಾರ್ ಹೇಳಿದ್ದು ನೆನಪಿದೆ ಆಲ್ವಾ , ಸೊ ಕಾಲ್ಡ್ ಬಿಗ್ ಬಾಸ್ ಮನೆಯ ಸ್ವಯಂ ಘೋಷಿತ ರಾಜಮಾತೆ ಅಶ್ವಿನಿ ಗೌಡ ಅವ್ರ ಇಂಥಾ ನಿರ್ಧಾರವನ್ನ ತಗೊಂಡಿದ್ದು ಅಂತ ಅನ್ಸಿದೆ, ತಾವ್ ಮಾಡಿದ್ದ ಪ್ಲಾನ್ ಎಲ್ಲ ತಮಗೆ ರಿವರ್ಸ್ ಆಯ್ತಲ್ಲಾ ಅನ್ನೋ ನೋವು ಹಂಗ್ ಮಾಡ್ಬಿಟ್ಟಿದೆ, ಯಾಕ್ ಹಿಂಗ್ ಹೇಳ್ತಿದೀನಿ ಗೊತ್ತಾ?

ಈ ವಾರ ಕಿಚ್ಚ ನಡೆಸಿದ ಪಂಚಾಯಿತಿ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಸಂಚಲನವನ್ನೇ ತಂದಿದೆ. ಕಿಚ್ಚನ ಕ್ಲಾಸ್ ವೇಳೆ ಅಶ್ವಿನಿ ಗೌಡ ಮತ್ತು ಜಾಹ್ನವಿಗೆ ಗಟ್ಟಿಯಾಗಿ ಮಾತಾಡಿದ ಕಿಚ್ಚ , ನಿಯಮ ಉಲ್ಲಂಘನೆ ಮತ್ತು ಅಶ್ವಿನಿ ಗೌಡ ಅವ್ರು ಬಳಸಿದ ಮಾತುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಮರ್ಯಾದೆ ಕೊಟ್ಟು ತಗೊಳ್ಳಿ”, “ಇಲ್ಲಿ ವುಮನ್ ಕಾರ್ಡ್ ಬೇಡ” ಎಂಬ ಸುದೀಪ್ ಅವರ ಹೇಳಿಕೆ ನಂತರ ಇಬ್ಬರೂ ಪ್ರತ್ಯೇಕವಾಗಿ ಕುಳಿತು ಕಣ್ಣೀರಿಟ್ಟರು. ಅಶ್ವಿನಿ “ನನಗೆ ಹಿಂಸೆ ಆಗುತ್ತಿದೆ, ತುಂಬಾ ಹರ್ಟ್ ಆಗಿದೆ” ಎಂದು ಹೇಳಿಕೊಂಡರೆ, ಜಾಹ್ನವಿ ಕೂಡ ಕಣ್ಣೀರು ಹಾಕಿದ್ರು.

ಅಶ್ವಿನಿ ಗೌಡ ಅವ್ರು ಹೇಳ್ತಾರೆ, ಹೊರಗೆ ಹೇಗೆ ಕಾಣಿಸುತ್ತಿದೆ ಗೊತ್ತಿಲ್ಲ. ಮಾತಿನ ಭರದಲ್ಲಿ ಏನಾದ್ರೂ ತಪ್ಪಾಗಿ ಆಗ್ತಿದೆ ಅನಿಸುತ್ತಿದೆ”. “ನಾನು ಊಟ ಬಿಟ್ಟದ್ದು ಬ್ಲಾಕ್‌ಮೇಲ್ ಅಲ್ಲ, ಆ ಕ್ಷಣಕ್ಕೆ ಎಮೋಶನಲ್ ಆಗಿಬಿಟ್ಟೆ. ಸ್ವಾಭಿಮಾನ ಮಾತ್ರ ಕಾಪಾಡಿಕೊಂಡೆ” ಎಂದರು. “ನನಗೆ ಸಖತ್ ಹಿಂಸೆ ಆಗುತ್ತಿದೆ. ಈ ಗೇಮ್ ನನಗಲ್ಲ ಅನಿಸುತ್ತಿದೆ. ಪ್ರತೀ ವಾರ ನಮಗೇ ಕ್ಲಾಸ್ ಇದೆ ಎಂದರೆ ತಪ್ಪು ಮಾಡ್ತಿರೋ ಹಾಗೆ ಕಾಣ್ತಿದೆ. ಈಗಾಗಲೇ ಹೊರಗೆ ನೆಗೆಟಿವ್ ಆಗಿ ಬಿಂಬಿತವಾಗಿರೋ ಹಾಗೆ ಭಾಸವಾಗುತ್ತಿದೆ” ಎಂದು ಮನಸ್ಸಿನ ಮಾತು ಹೊರಹಾಕಿದರು. ಅಡಿಯೋ ಕ್ಲಿಪ್‌ಗಳಲ್ಲಿ ಕೇಳಿದ ಮಾತುಗಳು ಮತ್ತಷ್ಟು ತೊಂದರೆ ತಂದಿವೆ ಎಂದು ಅಶ್ವಿನಿ ಬೇಸರ ವ್ಯಕ್ತಪಡಿಸಿದರು.

ಅಕ್ಚುಲಿ ಏನ್ ಗೊತ್ತಾ ? ಅಶ್ವಿನಿ ಗೌಡ ಅವ್ರು ತಮ್ಮ ಪ್ಲಾನ್ ಎಲ್ಲ ಉಲ್ಟಾ ಆಗೋಯ್ತು ಅಂತ ಇಷ್ಟು ಫೀಲ್ ಮಾಡ್ಕೊತಿದ್ದಾರೆ ಅಂತ ನನಗೆ ಅನ್ನಿಸ್ತಿದೆ, ಅಶ್ವಿನಿ ಗೌಡ ಮತ್ತೆ ಅಭಿಷೇಕ್ ಇವ್ರಿಬ್ರಲ್ಲಿ ಕ್ಯಾಪ್ಟನ್ ಆಗಿ ಒಬ್ರನ್ನ ಆಯ್ಕೆ ಮಾಡೋಕೆ ಬಿಗ್ ಬಾಸ್ ಒಂದು ಚಟುವಟಿಕೆಯನ್ನ ಕೊಟ್ಟಿದ್ರು , ನೀವೆಲ್ರು ಅದನ್ನ ನೋಡೇ ಇರ್ತೀರ, ಆ ಟಾಸ್ಕ್ ಅಲ್ಲಿ ಗಿಲ್ಲಿ ಮತ್ತೆ ಕಾವ್ಯ ಇಬ್ರು ಸೇರ್ಕೊಂಡು ಅಶ್ವಿನಿ ಗೌಡ ಅವ್ರಿಗೆ ಸಕ್ಕತ್ತಾಗಿ ಉರ್ಸಿದ್ರು, ಅದ್ರಲ್ಲೂ ಗಿಲ್ಲಿ ಮೊದ್ಲೇ ಉರಿಸೋದ್ರಲ್ಲಿ PHD ಹೋಲ್ಡರ್ ಬೇರೆ, ಗಿಲ್ಲಿ ಮಾತ್ತ್ರ ಕ್ರೇಜಿಯಾಗಿ ತಮ್ಮ ಉರ್ಸೋ ಕೆಲಸವನ್ನ ಮಾಡುದ್ರು, ಇಲ್ಲಿ ನೀವ್ ಅಬ್ಸರ್ವ್ ಮಾಡ್ಬೇಕಿರೋದು ಅಶ್ವಿನಿ ಗೌಡ ಅವ್ರನ್ನ, ಅಶ್ವಿನಿ ಗೌಡ ಮನಸ್ಸಲ್ಲಿ ತಾನು ಗೆದ್ದು ಕ್ಯಾಪ್ಟನ್ ಆಗ್ಬೇಕು ಅನ್ನೋ ಆಸೆಗಿಂತ ಗಿಲ್ಲಿ -ಕಾವ್ಯ ಅದೇನ್ ಮಾತಾಡ್ತಾರೋ ಅದಕ್ಕೆ ವೀಕೆಂಡ್ ಅಲ್ಲಿ ಕಿಚ್ಚ ಕ್ಲಾಸ್ ತಗೋಬೇಕು ಅನ್ನೋ ದುರಾಸೇನೆ ಹೆಚ್ಚಾಗಿತ್ತು ಅನ್ನೋದು ಸ್ಪಷ್ಟ…..

ಅದ್ಹೇಗೆ ಅಂತೀರಾ, ೧೨ ನಿಮಷ ಆದ್ಮೇಲೆ ಬೆಲ್ ಹೊಡಿಬೇಕು ಅನ್ನೋ ಚಿಕ್ಕ ವಿಷಯ ಗೊತ್ತಿಲ್ದೆ ಇರೋವಷ್ಟು ದಡ್ಡರಂತೂ ಆ ಮಹಾ ತಾಯಿ ಅಲ್ಲ, ಟಾಸ್ಕ್ ಮುಗಿದು ಅಭಿ ಕ್ಯಾಪ್ಟನ್ ಆಗಿ ಆಯ್ಕೆಯಾದ್ಮೇಲೆ ಎಲ್ರು ಆಕೆಯನ್ನ “ಹೀಗ್ ಯಾಕ್ ಮಾಡುದ್ರಿ” ಅಂತ ಕೇಳೀದಾಗ, ನಂಗೆ ಬೇರೆ ಏನೋ ಪ್ಲಾನ್ ಇದೆ ಅಂತ ಹೇಳಿದ್ರು, ಆ ಒಂದು ಪಾಯಿಂಟ್ ಅನ್ನ ನೆನಪಿಟ್ಕೋಳಿ, ನೀವ್ ಅಷ್ಟು ಸರಿಯಾಗಿ ಅಬ್ಸರ್ವ್ ಮಾಡಿಲ್ಲ ಅಂದ್ರೆ ಆ ಒಂದು ಪರ್ಟಿಕ್ಯುಲರ್ ಎಪಿಸೋಡನ್ನ ಜಿಯೋ ಹಾಟ್ಸ್ಟಾರ್ಗೆ ಹೋಗಿ ವಾಪಾಸ್ ನೋಡಿ ನಾನ್ ಏನ್ ಹೇಳ್ತಿದಿನೋ ಅದು ನಿಮಗೆ ನಿಜವೇ ಅನ್ಸುತ್ತೆ ….

ಇನ್ನು ಎರಡನೇ ಪಾಯಿಂಟ್ ಗಿಲ್ಲಿ ಅಶ್ವಿನಿ ಗೌಡಾಗೆ ಕ್ಷಮೆ ಕೇಳೋಕೆ ಅಂತ ಹೋದಾಗ, ಅಶ್ವಿನಿ ಹೇಳ್ತಾರೆ ” ಸಿಗು ನೀನ್ ವೀಕೆಂಡ್ ಅಲ್ಲಿ ಸಿಗು ” ಅಂತ ಇದನ್ನು ನೀವ್ ಎಪಿಸೋಡ್ನಲ್ಲಿ ನೋಡಿರ್ತೀರ,ನೋಡಿಲ್ಲ ಅಂದ್ರೆ ಹೋಗಿ ನೋಡಬಹುದು, ಸೊ ಇದ್ರಲ್ಲಿ ಪಕ್ಕ ಅಂತ ಅನ್ಸೋದು ಇದೊಂದೇ, ಅಶ್ವಿನಿ ಗೌಡಗೆ ತನ್ನ ಗೆಲುವಿನ ನಗುವಿಗಿಂತ ಗಿಲ್ಲಿಯ ನೋವನ್ನ ನೋಡ್ಬೇಕು ಅನ್ನೋ ಆಸೇನೆ ಜಾಸ್ತಿ ಇತ್ತು, ಆದ್ರೆ ಏನ್ ಮಾಡೋದು ತನ್ನ ಪ್ಲ್ಯಾನ್ ಎಲ್ಲ ಉಲ್ಟಾ ಆಗಿ, ತಮಗೆ ಹೊಡೆತ ಬಿತ್ತು, ತಾನ್ ಪ್ಲ್ಯಾನ್ ಮಾಡಿದಂಗೆ ಏನು ಆಗ್ತಿಲ್ಲ ಅಂದ್ಮೇಲೆ ನಾನ್ ಇಲ್ಲಿ ಯಾಕ್ ಇರ್ಬೇಕು ಅನ್ನೋವಷ್ಟರ ಮಟ್ಟಿಗೆ ಗಟ್ಟಿಗಿತ್ತಿಯಾಗಿದ್ದ ಸೊ ಕಾಲ್ಡ್ “ಅಶ್ವಿನಿ ಗೌಡ” ಬಂದ್ಬಿಟ್ಟಿದಾರೆ,…

ಇಲ್ಲಿ ಇನ್ನು ಒಂದು ವಿಚಾರ ನೀವ್ ಗಮನಿಸ ಬೇಕಿರೋದು ಏನಂದ್ರೆ, ಗಿಲ್ಲಿ ಯಾವಾಗ್ಲೂ ಹೇಳ್ತಿರ್ತಾರೆ ಅಶ್ವಿನಿ ಗೌಡ ಮುಂತಾದವರು ಇರೋ ರೂಮ್ ಏನಿದೆ, ಅಲ್ಲಿ ನೆಗೆಟಿವ್ ಎನರ್ಜಿ ಇದೆ ಅಂತ ಅದು fortunetly or unfortunetly ನಿಜ ಆಗ್ತಿದೆ, ಚಂದ್ರಪ್ರಭ ಕೂಡ ತಾವೇ ಮನೆಯಿಂದ ಹೊರಗ್ ಹೋಗೋ ನಿರ್ಧಾರ ಮಾಡಿದ್ರು , ಈಗ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರೋ ಅಶ್ವಿನಿ ಗೌಡ ಕೂಡ ಅದೇ ಮನಸ್ಥಿತಿಯನ್ನ ವ್ಯಕ್ತಪಡಿಸ್ತಿದ್ದಾರೆ, ಆದ್ರೆ ಖಂಡಿತ ಅಶ್ವಿನಿ ಗೌಡ ಅವರ ವಿಚಾರದಲ್ಲಿ ಮನೆ ಅಥವಾ ವಾಸ್ತು ತಪ್ಪಲ್ಲ, ಇದು ಅವರ ಮನಸ್ಸಿನ,ಮನಸ್ಥಿತಿಯ ವಾಸ್ತು ದೋಷ ಅನ್ನೋದು ಪಕ್ಕ …. ಒಟ್ನಲ್ಲಿ ಬಿಗ್ ಬಾಸ್ ಅನ್ನೋವಂತ ವ್ಯಕ್ತಿತ್ವದ ಆಟದಲ್ಲಿ ಮತ್ತೊಬ್ಬರಿಗೆ ಕೇಡು ಬಗೆಯೋರನ್ನ ಕರ್ಮ ಬಿಟ್ರು ಕಿಚ್ಚ ಬಿಡಲ್ಲ , ಕರುನಾಡ ಜನತೆ ಬಿಡಲ್ಲ ಅನ್ನೋದು ನಮ್ಮೆಲ್ಲರಿಗೂ ಗೊತ್ತೇ ಇದೆ….

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss