- Advertisement -
ಕೊಲಂಬೊ: ದ್ವೀಪ ರಾಷ್ಟ್ರ ಲಂಕಾದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆದಿದ್ದರಿಂದ ಮುಂಬರುವ ಪ್ರತಿಷ್ಠಿತ ಏಷ್ಯಾಕಪ್ ಟಿ20 ಟೂರ್ನಿ ಯುಎಇಗೆ ಸ್ಥಳಾಂತರವಾಗುವ ಸಾಧ್ಯತೆ ಹೆಚ್ಚಿದೆ.
ಕೆಲವು ವಾರಗಳಿಂದ ಶ್ರೀಲಂಕಾ ಆರ್ಥಿಕ ಬಿಕಟ್ಟು ಎದುರಿಸಿತ್ತು. ನಂತರ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದವು.
ಇದೀಗ ಏಷ್ಯಾಕಪ್ ಟೂರ್ನಿ ಏಷ್ಯಾ ಕಪ್ ಟಿ20 ಟೂರ್ನಿ ಯುಎಇಗೆ ಸ್ಥಳಾಂತರವಾಗು ಸಾಧ್ಯತೆ ಹೆಚ್ಚಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿಸಿಲ್ವಾ ತಿಳಿಸಿದ್ದಾರೆ.
ಆರು ರಾಷ್ಟ್ರಗಳನ್ನೊಳಗೊಂಡ ಸರಣಿ ವೇಳಾಪಟ್ಟಿಯಂತೆ ಆ.26ರಿಂದ ಸೆ.11 ರವರೆಗೆ ನಡೆಯಲಿದೆ. ಈ ಕುರಿತು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕೆಲವೇ ದಿನಗಳಲ್ಲಿ ಅಂತಿಮ ತೀರ್ಮಾನಕ್ಕೆ ಬರಲಿದೆ.
- Advertisement -