Tuesday, April 15, 2025

Latest Posts

ಅಸ್ಸಾಂ-ಮೇಘಾಲಯ ಗಡಿಯಲ್ಲಿ ಗುಂಡಿನ ದಾಳಿ : 6 ಜನರ ಸಾವು, ಇಂಟರ್ನೆಟ್ ಸ್ಥಗಿತ

- Advertisement -

ಶಿಲ್ಲಾಂಗ್: ಗುಂಡಿನ ದಾಳಿಯಲ್ಲಿ ಅಸ್ಸಾಂ ಅರಣ್ಯ ಅಧಿಕಾರಿ ಸೇರಿ 6 ಜನ ಮೃತಪಟ್ಟ ಹಿನ್ನೆಲೆ ಮೇಘಾಲಯ ರಾಜ್ಯದ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ. ಪಶ್ಚಿಮ ಜೈನ್ತಿಯಾ ಹಿಲ್ಸ್​​ನ ಮುಕ್ರೋಹ್​ನಲ್ಲಿ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ 6 ಜನ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಮೇಘಾಲಯದ 7 ಜಿಲ್ಲೆಗಳ್ಲಲಿ ಬೆಳಿಗ್ಗೆ 10.30 ರಿಂದ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೇಘಾಲಯದ ಪೊಲೀಸ್ ಇಲಾಖೆ ಅಧಿಸೂಚನೆ ಹೊರಡಿಸಿದೆ. ದಾಳಿಯಲ್ಲಿ ಅರಣ್ಯಾಧಿಕಾರಿ ಸೇರಿ 6 ಜನ ಮೃತಪಟ್ಟಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹೇಳಿದ್ದಾರೆ.

ಹಿಂದೂ ಬಾಲಕಿ ಮೇಲೆ ಮುಸ್ಲಿಂ ವ್ಯಕ್ತಿಯಿಂದ ಅತ್ಯಾಚಾರ

ಮೇಘಾಲಯ ಪೊಲೀಸ್ ಎಫ್​ಐಆರ್​ ದಾಖಲಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಕ್ರೋಹ್, ಪಶ್ಚಿಮ ಜೈನ್ತಿಯಾ ಹಿಲ್ಸ್, ಜೊವಅಯ್​ನಲ್ಲಿ ಸಾರ್ವಜನಿಕ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಮೇಘಾಲಯ ರಾಜ್ಯದ ಶಾಂತಿ ಮತ್ತು ನೆಮ್ಮದಿ ಕಾಪಡಲು , ಕಾನೂನು ಸುವ್ಯವಸ್ಥೆ ಕಾಪಾಡಲು ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಗಟ್ಟಲು ಗೃಹ ಇಲಾಖೆ ಕಾರ್ಯದರ್ಶಿ ಮೊಬೈಲ್ ಇಂಟರ್ನೆಟ್​ ಸೇವೆಯನ್ನು ಸ್ಥಗಿತಗೊಳಿಸಲು ತಿಳಿಸಿದೆ.

ಬಿಸಿ ಆಹಾರದಲ್ಲಿ ನಿಂಬೆ ರಸವನ್ನು ಏಕೆ ಹಾಕಬಾರದು..?

ದಶಕದ ನಂತರ ಬೀದರ್ ಜಿಲ್ಲಾ ಉತ್ಸವ ಮಾಡಲು ಜಿಲ್ಲಾಡಳಿತ ನಿರ್ಧಾರ

- Advertisement -

Latest Posts

Don't Miss